ಹೊಸದಿಗಂತ ಡಿಜಿಟಲ ಡೆಸ್ಕ್:
ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ರೈಲು ಚಾಲಕನೊಬ್ಬ ಕಚೋರಿ ಕೊಳ್ಳಲು ರೈಲು ನಿಲ್ಲಿಸಿದ್ದಾನೆ. ಲೊಕೊ ಪೈಲಟ್‌ಗೆ ರೈಲಿನಲ್ಲಿ ಹೋಗುವಾಗ ಕಚೋರಿ ತಿನ್ನುವ ಮನಸ್ಸಾಗಿದ್ದು, ಮಾರ್ಗಮಧ್ಯೆ ಬಸ್ ನಿಲ್ಲಿಸುವಂತೆ ರೈಲನ್ನೇ ನಿಲ್ಲಿಸಿ ಕಚೋರಿ ಖರೀದಿ ಮಾಡಿದ್ದಾನೆ.
ಎರಡು ರೋಡ್‌ನಡುವೆ ರೈಲ್ವೆ ಗೇಟ್ ಹಾಕಿದ್ದು, ಬೈಕ್, ಕಾರ್‌ಗಳು ರೈಲ್ವೆ ಗೇಟ್ ತೆರೆಯಲು ಕಾದು ನಿಂತಿದ್ದಾರೆ. ಈ ವೇಳೆ ಚಾಲಕ ರೈಲು ನಿಲ್ಲಿಸಿ ಕಚೋರಿ ಪಡೆದಿದ್ದಾರೆ. ಈ ಹಳೆಯ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆಯೇ ಚಾಲಕ ಸೇರಿ ಐವರನ್ನು ಅಮಾನತು ಮಾಡಲಾಗಿದೆ.
ವಿಡಿಯೋದಲ್ಲೇನಿದೆ?
ಚಾಲಕ ಕಚೋರಿ ತರಲು ಯಾರನ್ನೋ ಕಳಿಸಿದಂತೆ ಕಾಣುತ್ತದೆ. ಆ ವ್ಯಕ್ತಿ ಕೈಯಲ್ಲಿ ಪಾರ್ಸೆಲ್ ಹಿಡಿದು ರೈಲಿಗಾಗಿ ಕಾದು ನಿಂತಿರುತ್ತಾನೆ. ಆತನ ಬಳಿಗೆ ಬಂದಾಗ ರೈಲು ನಿಂತಿದ್ದು, ಚಾಲಕ ಆತನಿಂದ ಕಚೋರಿ ಪಡೆಯುತ್ತಾನೆ. ಕೆಲ ಸೆಕೆಂಡುಗಳ ನಂತರ ಮತ್ತೆ ರೈಲು ಚಲಿಸಲು ಪ್ರಾರಂಭಿಸುತ್ತದೆ.
@AshwiniVaishnaw @RailMinIndia @GMNWRailway @DRMJaipur @drm_dli
यह वीडियो एकwhatsappग्रुप के माध्यम से आज ओर अभी देखने को मिला हैक्या यह रेलवे नियमानुसार सही है अगर गलत है तो एक्शन लीजिए और सम्बंधित सभी व्यक्तियों पर कार्यवाही करें@vishalmrcool @JAGMALSINGH_MON @vasudhoot pic.twitter.com/Tw5dtkozzn
— NARENDRA KUMAR JAIN (@NarendraJainPcw) February 18, 2022