ಭಾರತೀಯ ಬೌಲರ್​ಗಳ ದಾಳಿಗೆ ಎಡವಿದ ಆಂಗ್ಲರು: 132ಕ್ಕೆ ಇಂಗ್ಲೆಂಡ್ ಆಲೌಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡ ನೀರಸ ಪ್ರದರ್ಶನ ತೋರಿದೆ. ಭಾರತೀಯ ಬೌಲರ್​ಗಳ ದಾಳಿಗೆ ಪೆವಿಲಿಯನ್ ಪರೇಡ್ ನಡೆಸಿದ ಆಂಗ್ಲರು 20 ಓವರ್​ಗಳಲ್ಲಿ ಕೇವಲ 132 ರನ್​ಗಳ ಸಾಧಾರಣ ಮೊತ್ತ ದಾಖಲಿಸಿದೆ.

ಟಾಸ್​ ಗೆದ್ದ ಭಾರತ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಆರಂಭಿಸಿದ ಆಂಗ್ಲ ಪಡೆ ಖಾತೆ ತೆರೆಯುವ ಮುನ್ನವೇ ಮೊದಲ ವಿಕೆಟ್ ಕಳೆದುಕೊಂಡಿತು. ಅರ್ಶದೀಪ್ ಸಿಂಗ್ ಮೊದಲ ಓವರ್​ನಲ್ಲೇ ಫಿಲ್ ಸಾಲ್ಟ್​ (0) ಕೀಪರ್​ ಸಂಜು ಸ್ಯಾಮ್ಸನ್​ಗೆ ಕ್ಯಾಚ್ ನೀಡಿ ಔಟ್ ಆದರು. ನಂತರ ಮತ್ತೆ 3ನೇ ಓವರ್​ನಲ್ಲಿ ಮತ್ತೊಬ್ಬ ಆರಂಭಿಕ ಬೆನ್​ ಡಕೆಟ್(4) ರನ್ನ ಕೂಡ ಅರ್ಶದೀಪ್ ಪೆವಿಲಿಯನ್​​ಗಟ್ಟಿದರು. ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ನಾಯಕ ಬಟ್ಲರ್ ಮಾತ್ರ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರು. ಅವರು 44 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ ಸಹಿತ 68 ರನ್​ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು.

ಬಟ್ಲರ್, ಹ್ಯಾರಿ ಬ್ರೂಕ್ ಜೊತೆ ಸೇರಿ 3ನೇ ವಿಕೆಟ್​ಗೆ 48 ರನ್​ಗಳಿಸಿದರು. ಆದರೆ ಬ್ರೂಕ್ ಕೇವಲ 17 ರನ್​ಗಳಿಸಿ ವರುಣ್​ ಚಕ್ರವರ್ತಿ ಬೌಲಿಂಗ್​ನಲ್ಲಿ ಕ್ಲೀನ್ ಬೌಲ್ಡ್ ಆದರು. ನಂತರ ಬಂದ ಆಲ್​ರೌಂಡರ್ ಲಿಯಾಮ್ ಲಿವಿಂಗ್​ಸ್ಟೋನ್ ಅದೇ ಓವರ್​ನಲ್ಲಿ 2 ಎಸೆತಗಳ ಡಕ್ ಆದರು. ಆರ್ಚರ್​ (12) ಹೊರೆತುಪಡಿಸಿ ನಂತರ ಬಂದ ಯಾವ ಬ್ಯಾಟರ್ ಕೂಡ ಎರಡಂಕಿ ಮೊತ್ತ ದಾಖಲಿಸಲಿಲ್ಲ. ಜಾಕೋಬ್​ ಬೆಥೆಲ್ 7, ಜೇಮಿ ಓವರ್​ಟನ್ 2, ಗಸ್ ಅಟ್ಕಿನ್ಸನ್ 2, ಆದಿಲ್ ರಶೀದ್ ಅಜೇಯ 8, ಮಾರ್ಕ್​ವುಡ್ 1 ರನ್​ಗಳಿಸಿದರು. ಒಟ್ಟಾರೆ ಇಂಗ್ಲೆಂಡ್ ತಂಡ 20 ಓವರ್​ಗಳಲ್ಲಿ 132ಕ್ಕೆ ಆಲೌಟ್ ಆಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!