ಧರ್ಮಸ್ಥಳ:
ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಶವ ಹೂತಿರುವುದಾಗಿ ಮುಸುಕುಧಾರಿ ದೂರುದಾರನ ಹೇಳಿಕೆಯಂತೆ ೧೩ನೇ ಗುರುತಿನ ಸ್ಥಳದಲ್ಲೂ ಉತ್ಖನನ ಪೂರ್ಣಗೊಂಡಿದೆ. ಆದರೆ ಯಾವುದೇ ಕಳೇಬರ ಅಥವಾ ಕುರುಹುಗಳು ಲಭಿಸಿಲ್ಲ. ಇದರ ಬದಲಿಗೆ ಮಂಗಳವಾರ ಅಗೆತ ನಡೆಸಿದಾಗ ಸಿಕ್ಕಿದ್ದು ತೀರ್ಥ !
ಅಚ್ಚರಿಯಾಯಿತೇ?ಬಾಕಿಯಿದ್ದ 13ನೇ ಗುರುತಿನ ಸಂಖ್ಯೆಯನ್ನು ಅಗೆಯಲು ಡ್ರೋನ್ ಮೌಂಟೆಡ್ ಜಿಪಿಆರ್ ತಂತ್ರಜ್ಞಾನ ಬಳಸಲಾಯಿತು.ಬಳಿಕ ಬುಲ್ಡೋಜರ್ ಯಂತ್ರ ಬಳಸಿ ಆಳಕ್ಕೆ ಉತ್ಖನನ ನಡೆಸಲಾಯಿತು. ಈ ಸಂದರ್ಭ ಯಾವುದೇ ಕಳೇಬರ ಅಥವಾ ದಫನದ ಕುರುಹು ಲಭಿಸದೆ, ಇದಕ್ಕೆ ಬದಲಿಗೆ ೧೦ಅಡಿ ದೂರದಲ್ಲಿರುವ ಪೂಜೆಗೆ ಬಳಸಲಾಗುವ ತೀರ್ಥ ಬಾವಿಯ ನೀರು ಇಲ್ಲಿ ಹರಿದು ಬಂದು ಎಲ್ಲರನ್ನೂ ಅಚ್ಚರಿಗೀಡು ಮಾಡಿತು.ಇಂತಹ ಸ್ಥಳದಲ್ಲಿ ಶವದಫನ ಮಾಡಲು ಸಾಧ್ಯವೇ ? ಇದಕ್ಕಿಂತ ಕುತ್ಸಿತ ಆರೋಪ ಬೇರಿರಲು ಸಾಧ್ಯವೇ ಎಂಬ ಪ್ರಶ್ನೆ ಕ್ಷೇತ್ರದಲ್ಲಿನ ಜನತೆಯಿಂದ ಕೇಳಿಬಂತು.
ನಿಗೂಢ ದೂರುದಾರನ ಹೇಳಿಕೆಯಂತೆ ಈಗಾಗಲೇ ಹತ್ತಾರು ಕಡೆಗಳಲ್ಲಿ ಅಗೆತ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ಇದರಿಂದಾಗಿ ಹಿಂದುಗಳ ಆರಾಧ್ಯ ಕ್ಷೇತ್ರವೊಂದಕ್ಕೆ ಕಳಂಕ ಹಚ್ಚುವ ಇಂತಹ ಹುನ್ನಾರದ ಹಿಂದಿರುವ ಕೈಗಳಾವುದು ಎಂಬ ಆಕ್ರೋಶವೀಗ ಎಲ್ಲೆಡೆ ವ್ಯಕ್ತವಾಗತೊಡಗಿದೆ.ನಿರಂತರ ಸುಳ್ಳು ಪ್ರಚಾರ ನಡೆಸುವುದು, ಅನಂತರ ಇದರಿಂದ ರೂಪುಗೊಂಡ ವಾತಾವರಣವನ್ನು ಬಳಸಿಕೊಂಡು ಶ್ರೀಕ್ಷೇತ್ರ ಮತ್ತು ಧರ್ಮಾಕಾರಿಯವರಿಗೆ ಕಳಂಕ ಹಚ್ಚುವುದು, ಹಿಂದು ಸಮಾಜದಿಂದ ಧಾರ್ಮಿಕ ಶ್ರದ್ಧೆಯನ್ನು ಅಳಿಸಿಹಾಕುವುದೇ ಮುಂತಾದ ಹುನ್ನಾರಗಳು ನಡೆಯುತ್ತಿರುವುದರ ಹಿಂದೆ ಭಾರೀ ದೊಡ್ಡ ಸಂಚಿರುವುದು ಈಗ ಗೋಚರಿಸಿದ್ದು, ಈಗ ಇಂತಹ ಸಂಚಿನ ವಿರುದ್ಧ ಸಿಐಟಿ ತನಿಖೆ ನಡೆಸಬೇಕೆಂಬ ಆಗ್ರಹ ತೀವ್ರಗೊಂಡಿದೆ.