ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದ ರಾಜಕೀಯ ಹೊಯ್ದಾಟವು ಸುಪ್ರಿಂ ಕೋರ್ಟ್ಗೆ ತಲುಪಿದ್ದು ಇಂದು ರೆಬೆಲ್ ಶಾಸಕರ ಅರ್ಜಿ ವಿಚಾರಣೆಯಾಗಲಿದೆ. ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಅಘಾಡಿ ಸರ್ಕಾರದಲ್ಲಿ ನಗರಾಭಿವೃಧ್ದೀ ಸಚಿವರಾಗಿದ್ದ ಹಾಗೂ ಶಾಸಕಾಂಗ ಪಕ್ಷದ ನಾಯಕರಾಗಿದ್ದ ಏಕನಾಥ ಶಿಂಧೆ ಶಿವಸೇನೆಯಿಂದ ಬಂಡಾಯವೆದ್ದು ಇತರ ಶಾಸಕರೊಂದಿಗೆ ಗುವಾಹಟಿಗೆ ಹೋಗಿ ಬೀಡು ಬಿಟ್ಟಿದ್ದರು. ಶಿಂಧೆಯವರ ಬಂಡಾಯಕ್ಕೆ 40ಕ್ಕೂ ಹೆಚ್ಚು ಶಾಸಕರು ಬೆಂಬಲ ನೀಡುತ್ತಿದ್ದಾರೆ ಎನ್ನಾಲಾಗಿತ್ತು.
ಬಂಡಾಯಕ್ಕೆ ಮದ್ದರೆಯಲು ಶಿವಸೇನೆಯೂ ಕೂಡ ಪ್ರತಿ ಅಸ್ತ್ರ ಪ್ರಯೋಗಿಸಿದ್ದು ಏಕನಾಥ ಶಿಂಧೆಯವರನ್ನು ಶಾಸಕಾಂಗ ಪಕ್ಷದ ನಾಯಕ ಸ್ಥಾನದಿಂದ ತೆಗೆದುಹಾಕಲಾಗಿದೆ. ಅಲ್ಲದೇ ಶಿಂಧೆ ಹಾಗೂ ಇತರ 16 ಶಾಕರನ್ನು ಅನರ್ಹಗೊಳಿಸಿ ಮಹಾರಾಷ್ಟ್ರದ ಉಪಸಭಾಪತಿ ನೋಟೀಸ್ ನೀಡಿದ್ದರು ಮತ್ತು ಶಿಂಧೆಯವರ ಜಾಗಕ್ಕೆ ಅಜಯ್ ಚೌಧರಿ ಅವರನ್ನು ನೇಮಿಸಲಾಗಿತ್ತು. ಇದನ್ನು ಪ್ರಶ್ನಿಸಿ ಬಂಡಾಯ ಶಾಸಕರು ಸುಪ್ರೀಂನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಸುಪ್ರೀಂ ಕೋರ್ಟ್ನ ರಜಾಕಾಲದ ಪೀಠವು ಇಂದು ಬೆಳಿಗ್ಗೆ 10.30ಕ್ಕೆ ಅವರ ಅರ್ಜಿಯನ್ನು ವಿಚಾರಣೆ ನಡೆಸುವ ಸಾಧ್ಯತೆಯಿದೆ. ತಮ್ಮ ವಿರುದ್ಧದ ಅನರ್ಹತೆ ಅರ್ಜಿಯಲ್ಲಿ ಯಾವುದೇ ಕ್ರಮ ಕೈಗೊಳ್ಳದಂತೆ ಉಪಸಭಾಪತಿಗೆ ನಿರ್ದೇಶನ ನೀಡುವಂತೆ ಶಿಂಧೆ ಸಲ್ಲಿಸಿರುವ ಮನವಿಯನ್ನು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೆ ಬಿ ಪರ್ದಿವಾಲಾ ಅವರ ರಜಾಕಾಲದ ಪೀಠ ವಿಚಾರಣೆ ನಡೆಸಲಿದೆ.
ಬಂಡಾಯ ಶಾಸಕರ ಪರವಾಗಿ ವಕೀಲ ಅಭಿನಯ್ ಶರ್ಮಾ ವಾದ ಮಂಡಿಸುತ್ತಿದ್ದು ತಮ್ಮದೇ ಚ್ಯುತಿಯ ನಿರ್ಣಯ ಬಾಕಿ ಇರುವಾಗ ಉಪಸಭಾಪತಿಯವರು ಸಂವಿಧಾನದ ಹತ್ತನೇ ಶೆಡ್ಯೂಲ್ ಅಡಿಯಲ್ಲಿ ಯಾವುದೇ ಸದಸ್ಯರನ್ನು ಅನರ್ಹಗೊಳಿಸಲು ಸಾಧ್ಯವಿಲ್ಲ ಮತ್ತು ಅಜಯ್ ಚೌಧರಿ ಮತ್ತು ಸುನೀಲ್ ಪ್ರಭು ಅವರನ್ನು ಎಸ್ಎಸ್ಎಲ್ಪಿಯ ನಾಯಕ ಮತ್ತು ಮುಖ್ಯ ಸಚೇತಕ ಎಂದು ಗುರುತಿಸಿದ ಕ್ರಮ ಕಾನೂನುಬಾಹಿರ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ತಮಗೆ 2/3 ದಷ್ಟು ಬೆಂಬಲವಿದ್ದು ಪಕ್ಷಾಂತರ ನಿಷೇಧ ಕಾಯಿದೆ ಅನ್ವಯವಾಗದು ಎಂದು ಶಿಂಧೆ ಹೇಳುತ್ತಿದ್ದರು.
ಆದರೆ ಯ ವಕೀಲ ದೇವದತ್ ಕಾಮತ್ ಹೊಸ ವಾದ ಮಂಡಿಸುತ್ತಿದ್ದು “2/3ದಷ್ಟು ಬಲಸ ಹೊಂದಿರುವ ಪರಿಕಲ್ಪನೆಯು ಪಕ್ಷ ವಿಲೀನದ ಸಂದರ್ಭದಲ್ಲಿ ಮಾತ್ರವೇ ಅನ್ವಯವಾಗುವಂಥದ್ದು ಪಕ್ಷದೊಂದಿಗೆ ವಿಲೀನಗೊಳ್ಳುವವರೆಗೆ ಅನರ್ಹತೆ ಅನ್ವಯಿಸುತ್ತದೆ. ಇಲ್ಲಿಯವರೆಗೂ ಅಂತಹ ಯಾವುದೇ ವಿಲೀನ ನಡೆದಿಲ್ಲ. ಸ್ಪೀಕರ್ ಅವರ ಅನುಪಸ್ಥಿತಿಯಲ್ಲಿ ಡೆಪ್ಯೂಟಿ ಸ್ಪೀಕರ್ ವಿಷಯಗಳಬಗ್ಗೆ ನಿರ್ಧಾಋ ತೆಗೆದುಕೊಳ್ಳುವ ಅಧಿಕಾರ ಹೊಂದಿದ್ದಾರೆ. ಬಂಡಾಯಗಾರರು ಅನಧಿಕೃತ ಇಮೆಲ್ ವಿಲಾಸದ ಮೂಲಕ ಅವಿಶ್ವಾಸ ನಿರ್ಣಯ ಕಳುಹಿಸಿದ್ದಾರೆ” ಎಂದು ಹೇಳಿದ್ದಾರೆ.