ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರಕಾರ 5 ಕೆ.ಜಿ ಅಕ್ಕಿ, ಉಳಿದ 5 ಕೆ.ಜಿಗೆ ಹಣ ನೀಡುವುದಾಗಿ ಇಂದು ತಿಳಿಸಿದ್ದು, ಇದರ ಬಳಿಕ ಸರಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಮಾತನಾಡಿದ್ದಾರೆ.
ಅಕ್ಕಿ (Rice) ಕೊಡುತ್ತಾರೋ, ದುಡ್ಡು ಕೊಡುತ್ತಾರೋ ಅದು ಅವರ ಹಣೆಬರಹ. ಯಾವ ರೀತಿ ಮಾಡಬೇಕು ಅಂತ ಅವರೇ ತೀರ್ಮಾನ ಮಾಡಲಿ. ಚುನಾವಣೆಯಲ್ಲಿ ಮತ ಪಡೆಯಲು ತರಾತುರಿಯಲ್ಲಿ ಘೋಷಣೆ ಮಾಡಿದ್ರು. ಇದು ಅವರು ಮಾಡಿಕೊಂಡಿರೋ ಎಡವಟ್ಟು ಎಂದು ಹೇಳಿದರು.
ಘೋಷಣೆ ಮಾಡುವ ಮುನ್ನ ಮುಂದಾಗುವ ಅನಾಹುತಗಳ ಬಗ್ಗೆ ಯೋಚನೆ ಮಾಡದೇ ಘೋಷಣೆ ಮಾಡಿದ್ರು ಈಗ ಅನುಭವಿಸುತ್ತಿದ್ದಾರೆ. 5 ಕೆ.ಜಿ ಅಕ್ಕಿ ಬದಲು ಹಣ ಕೊಡೊದಾದ್ರೆ ಯಾವ ರೀತಿ ಕೊಡ್ತೀರಿ. ಯಾವ ರೀತಿ ಹಣ ತಲುಪಿಸ್ತೀರಿ. ಅದು ಮಧ್ಯವರ್ತಿಗಳ ಕೈ ಸೇರಲ್ವಾ.? ಈ ಎಲ್ಲದರ ಬಗ್ಗೆ ಮುಂದೆ ಮಾತನಾಡ್ತಿನಿ ಎಂದುಚಾಟಿ ಬೀಸಿದರು .
ನನ್ನ ಪ್ರಕಾರ, ರಾಜ್ಯದಲ್ಲಿ ಯೋಜನೆಗೆ ಹಣ ಒದಗಿಸಲು ಎನೂ ಸಮಸ್ಯೆ ಇಲ್ಲ. ಹಣ ಎಲ್ಲಿಂದ ತರ್ತಾರೆ ಅಂತ ಬಿಜೆಪಿ (BJP) ಯವರು ಏನು ಬೇಕಾದರೂ ಹೇಳಬಹುದು. ಆದರೆ ನಾನು ಹಿಂದೆ ಸಾಲಮನ್ನಾ ಮಾಡಿದಾಗ ದರೋಡೆ ಮಾಡಿ ಹಣ ಕೊಟ್ನಾ. ಜನರ ದುಡ್ಡನ್ನೆ ಕೊಟ್ಟಿದ್ದೀನಿ. ರಾಜ್ಯದೇ ಯೋಜನೆಗೂ ಯಾವುದಕ್ಕೂ ಹಣಕಾಸಿನ ಕೊರತೆ ಇಲ್ಲ. ಅದನ್ನ ಸರಿಯಾಗಿ ಮ್ಯಾನೇಜ್ ಮಾಡಬೇಕು ಎಂದು ಹೇಳಿದರು.