ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಗಾತಿ ಮೇಲಿನ ಕೋಪಕ್ಕೆ ಮಗುವನ್ನೇ ತಂದೆ ಕಿಡ್ನ್ಯಾಪ್ ಮಾಡಿ ಸಿಕ್ಕುಬಿದ್ದಿದ್ದಾನೆ. ನ್ಯಾಯಾಲಯದ ಆದೇಶ ಇದ್ದರೂ ಫಿಲ್ಮಿ ಸ್ಟೈಲ್‌ನಲ್ಲಿ ಕಿಡ್ನ್ಯಾಪ್ ಮಾಡಿದ ತಂದೆಯನ್ನು ಬೆಂಗಳೂರಿನ ಕೊಡಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಬಳ್ಳಾರಿ ಮೂಲದ ಉದ್ಯಮಿಯಾದ ಹರಿಕೃಷ್ಣ, ರಾಮೇಶ್ವರಿ ಎನ್ನುವವರ ಜೊತೆ ಲಿವಿಂಗ್‌ನಲ್ಲಿ ಇದ್ದರು, ಇವರಿಗೆ ಗಂಡು ಮಗು ಜನಿಸಿತ್ತು. ಎಲ್ಲವೂ ಸರಿಯಾಗಿಯೇ ಇತ್ತು. ಆದರೆ ತಂದೆಯ ಹತ್ಯೆ ಪ್ರಕರಣದಲ್ಲಿ ಹರಿಕೃಷ್ಣನನ್ನು ಪೊಲೀಸರು ಬಂಧಿಸಿದ್ದು, ರಾಮೇಶ್ವರಿ ಅವರಿಂದ ದೂರ ಆಗಿದ್ದರು.
ಮಗು ಬೇಕು ಎಂದು ಹರಿಕೃಷ್ಣ ಕೋರ್ಟ್ ಮೆಟ್ಟಿಲೇರಿದ್ದರು, ಆದರೆ ನ್ಯಾಯಾಲಯ ಮಗು ತಾಯಿಯ ಜೊತೆ ಇರಲಿ ಎಂದಿತ್ತು. ಇದರಿಂದ ಸಿಟ್ಟಾಗ ಹರಿಕೃಷ್ಣ ಜೈಲಿನಿಂದ ಬಿಡುಗಡೆಯಾದ ಮೇಲೆ ಮಗುವಿನ ಕಿಡ್ನ್ಯಾಪ್‌ಗೆ ಪ್ಲ್ಯಾನ್ ಮಾಡಿದ್ದ.
ಮಗುವನ್ನು ರಾಜೇಶ್ವರಿ ಸ್ಕೂಲ್‌ಗೆ ಬಿಡುವ ಸಮಯದಲ್ಲಿ ಐವರು ಮಹಿಳೆಯರು ಏಕಾಏಕಿ ರಾಜೇಶ್ವರಿ ಗಾಡಿಗೆ ಅಡ್ಡ ಬಂದಿದ್ದಾರೆ. ಪರಿಣಾಮವಾಗಿ ರಾಜೇಶ್ವರಿ ಹಾಗೂ ಮಗು ಕೆಳಗೆ ಬಿದ್ದಿದ್ದಾರೆ. ಆ ಸಂದರ್ಭದಲ್ಲಿ ಫಿಲ್ಮಿ ಸ್ಟೈಲ್‌ನಲ್ಲಿ ಬಂದ ಹರಿಕೃಷ್ಣ ಕೆಳಗೆ ಬಿದ್ದ ಮಗುವನ್ನು ಎತ್ತಿಕೊಂಡು ಕಾರ್‌ನಲ್ಲಿ ಪರಾರಿಯಾಗಿದ್ದಾರೆ.
ತಕ್ಷಣ ರಾಜೇಶ್ವರಿ ಪೊಲೀಸರ ಮೊರೆ ಹೋಗಿದ್ದು, ಆರು ದಿನಗಳ ನಂತರ ಹರಿಕೃಷ್ಣ ಸಿಕ್ಕಿಬಿದ್ದಿದ್ದಾನೆ. ಮಗುವನ್ನು ಅಮ್ಮನ ಬಳಿಗೆ ಸೇರಿಸಲಾಗಿದೆ.