ಹೊಸದಿಗಂತ ಡಿಜಿಟಲ್ ಡೆಸ್ಕ್:
ನನ್ನ ಮಗಳ ಬಾಯಲ್ಲಿ ಅಪ್ಪಾ ಎಂದು ಕರೆಸಿಕೊಳ್ಳೋದಕ್ಕೆ ಅದೆಷ್ಟೋ ಮಂದಿ ಕಾದು ಕುಳಿತಿದ್ದಾರೆ. ಆದರೆ ಇಲ್ಲೊಬ್ಬ ತಂದೆ ತನ್ನ ಮಗಳು ಸದಾ ಆಟಸಾಮಾನು ಕೊಡಿಸು, ಚಾಕ್ಲೆಟ್ ಕೊಡಿಸು ಎಂದು ಹಠ ಮಾಡಿದ್ದಕ್ಕೆ ಆಕೆಯ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಂದಿದ್ದಾನೆ.
ಮಧ್ಯಪ್ರದೇಶದ ಇಂದೋರ್‌ನಲ್ಲಿ ಎಂಟು ವರ್ಷದ ಮಗಳನ್ನು 37 ವರ್ಷದ ತಂದೆ ಕೊಂದಿದ್ದನೆ, ಆತ ಮಾದಕ ವ್ಯಸನಿಯಾಗಿದ್ದು, ಈ ಕೃತ್ಯ ಎಸಗಿದ್ದಾನೆ. ಮಗಳು ಎಲ್ಲದಕ್ಕೂ ಹಠ ಮಾಡುತ್ತಿದ್ದಾಳೆ, ನಾನು ಬಡವ ನಾನು ಇವೆಲ್ಲವನ್ನೂ ಎಲ್ಲಿಂದ ತರಲಿ. ಇದು ನನಗೆ ಸಿಟ್ಟು ಬರಿಸುತ್ತಿತ್ತು. ಈ ಹಠದಿಂದ ನನಗೆ ಮುಕ್ತಿ ಬೇಕಿತ್ತು. ಅದಕ್ಕೆ ಅವಳನ್ನು ಕೊಂದೆ ಎಂದು ಹೇಳಿಕೊಂಡಿದ್ದಾನೆ.
ಮಗುವಿನ ತಾಯಿ ಮೂರು ವರ್ಷದ ಹಿಂದೆಯೇ ಮಗಳು ಹಾಗೂ ಗಂಡನನ್ನು ಬಿಟ್ಟು ಹೋಗಿದ್ದಾಳೆ. ಕೂಲಿ ಕಾರ್ಮಿಕನಾದ ಆರೋಪ ನಿರ್ಮಾಣ ಹಂತದ ಕಟ್ಟಡದ ಬಳಿ ಮಗಳನ್ನು ಕರೆದುಕೊಂಡು ಹೋಗಿ ಕೊಂದಿದ್ದಾನೆ.