February 28, 2026
Saturday, February 28, 2026
spot_img

ಬಣ್ಣದ ಹಬ್ಬದಂದೇ ಬಾನಲ್ಲಿ ವಿಸ್ಮಯ: ಕರ್ನಾಟಕದಲ್ಲೂ ಗೋಚರಿಸಲಿದೆ ‘ಬ್ಲಡ್ ಮೂನ್’!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈ ವರ್ಷದ ಹೋಳಿ ಹಬ್ಬದ ಸಂಭ್ರಮಕ್ಕೆ ಬಾನಂಗಳದ ಅಪರೂಪದ ವಿದ್ಯಮಾನವೊಂದು ಸಾಕ್ಷಿಯಾಗಲಿದೆ. ಮಾರ್ಚ್ 3ರಂದು ಫಾಲ್ಗುಣ ಮಾಸದ ಹುಣ್ಣಿಮೆಯ ದಿನವೇ ‘ಕೇತುಗ್ರಸ್ತ ರಕ್ತಚಂದ್ರಗಹಣ’ ಸಂಭವಿಸಲಿದೆ.

ಈ ಖಗೋಳ ವಿಸ್ಮಯವು ಭಾರತದಾದ್ಯಂತ ಗೋಚರಿಸಲಿದ್ದು, ವಿಶೇಷವಾಗಿ ಕರ್ನಾಟಕದಲ್ಲಿ ಸುಮಾರು 25 ನಿಮಿಷಗಳ ಕಾಲ ಚಂದ್ರನು ಕೆಂಬಣ್ಣದಲ್ಲಿ ಕಂಗೊಳಿಸಲಿದ್ದಾನೆ.

ಗ್ರಹಣದ ಸಮಯದ ವಿವರ:

ಗ್ರಹಣ ಆರಂಭ: ಮಧ್ಯಾಹ್ನ 3:20ಕ್ಕೆ

ಗ್ರಹಣ ಅಂತ್ಯ: ಸಂಜೆ 6:47ಕ್ಕೆ

ಭಾರತದ ವಿವಿಧ ಭಾಗಗಳಲ್ಲಿ ಗ್ರಹಣದ ವಿವಿಧ ಹಂತಗಳು ಕಂಡುಬಂದರೂ, ಕರ್ನಾಟಕದಲ್ಲಿ 25 ನಿಮಿಷಗಳ ಕಾಲ ಈ ಕೆಂಬಣ್ಣದ ಚಂದಿರನ ದರ್ಶನ ಪಡೆಯಲು ಅವಕಾಶವಿದೆ.

ಹೋಳಿ ಹಬ್ಬದಂದೇ ಈ ಗ್ರಹಣ ಸಂಭವಿಸುತ್ತಿರುವುದು ಜ್ಯೋತಿಷ್ಯ ಶಾಸ್ತ್ರ ಹಾಗೂ ಖಗೋಳ ವಿಜ್ಞಾನದ ದೃಷ್ಟಿಯಿಂದ ಕುತೂಹಲ ಮೂಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !