ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಎಲೋನ್ ಮಸ್ಕ್ ಜಗಳ ತಾರಕಕ್ಕೇರುತ್ತಿದ್ದು, ಇದರ ಬಿಸಿ ಟೆಸ್ಲಾ ಷೇರುಗಳಿಗೆ ತಟ್ಟಿದೆ.
ಎಲೋನ್ ಮಸ್ಕ್ ಮಾಲಕತ್ವದ ಟೆಸ್ಲಾದ ಪ್ರತೀ ಷೇರುಗಳ ಮೌಲ್ಯ ಒಂದೇ ದಿನ 47 ಡಾಲರ್ ಇಳಿಕೆಯಾಗಿದ್ದು, ಈ ಮೂಲಕ ಇದು ಕಳೆದ 5 ದಿನಗಳಲ್ಲಿ 70 ಡಾಲರ್ ಇಳಿಕೆ ಕಂಡಿದೆ.
ಟ್ರಂಪ್ ಅವರನ್ನು ಉಚ್ಚಾಟಿಸಿ ಉಪಾಧ್ಯಕ್ಷ ಜೆಡಿ ವಾನ್ಸ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಮಸ್ಕ್ ಹೇಳಿಕೆ ನೀಡಿದ್ದರೆ, ಇದಕ್ಕೆ ತಿರುಗೇಟು ಎಂಬಂತೆ ಮಸ್ಕ್ ಕಂಪನಿ ಜೊತೆ ಮಾಡಿಕೊಂಡಿದ್ದ ಸರ್ಕಾರಿ ಒಪ್ಪಂದಗಳನ್ನು ಕಡಿತಗೊಳಿಸುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದರು. ಇದರ ನಡುವೆ ಟ್ರಂಪ್ನ ತೆರಿಗೆ ಕಡಿತ, ಖರ್ಚಿಗೆ ಸಂಬಂಧಿಸಿದ ಮಸೂದೆಯನ್ನು ಖಂಡಿಸಿ ಮಸ್ಕ್ ಎಕ್ಸ್ನಲ್ಲಿ ನಿರಂತರ ಪೋಸ್ಟ್ ಮುಂದುವರಿಸಿದ್ದರು. ಆದರೆ ಈ ವಿಚಾರಕ್ಕೆ ಸಂಬಂಧಿಸಿ ಮೌನಕ್ಕೆ ಶರಣಾಗಿದ್ದ ಟ್ರಂಪ್, ಮೊದಲ ಬಾರಿಗೆ ಮೌನ ಮುರಿದು ತಮ್ಮ ಹಳಸಿದ ಸಂಬಂಧದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರಲ್ಲದೆ, ಮಸ್ಕ್ ಅವರಿಂದ ತುಂಬಾ ನಿರಾಶೆಗೊಂಡಿದ್ದೇನೆ ಎಂದಿದ್ದಾರೆ. ಇದರೊಂದಿಗೆ ಮಸ್ಕ್ ಒಡೆತನದ ಇಂಟರ್ನೆಟ್ ಕಂಪನಿ ಸ್ಟಾರ್ಲಿಂಕ್ ಹಾಗೂ ರಾಕೆಟ್ ಕಂಪನಿ ಸ್ಪೇಸ್ಎಕ್ಸ್ನ ಆದಾಯಕ್ಕೆ ಕತ್ತರಿ ಹಾಕುವ ಎಚ್ಚರಿಕೆ ನೀಡಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ