ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆದಲ್ಲಿ ಭವ್ಯ ರಾಮಮಂದಿರದ ಲೋಕಾರ್ಪಣೆ ಬಳಿಕ ಇದೀಗ ಮತ್ತೊಂದು ಹಿಂದೂ ದೇವಾಲಯದ ಲೋಕಾರ್ಪಣೆಗೆ ಮೋದಿ ಸಜ್ಜಾಗಿದ್ದಾರೆ.
ಹೌದು, ಇದೆ ಮೊದಲ ಬಾರಿಗೆ ದುಬೈನಲ್ಲಿ ಹಿಂದೂ ದೇವಾಲಯವನ್ನು ನಿರ್ಮಾಣ ಮಾಡಲಾಗಿದ್ದು ಇದೀಗ ಲೋಕಾರ್ಪಣೆಗೆ ಸಜ್ಜಾಗಿದೆ. ನಾಳೆ ಅಬುಧಾಬಿಯಲ್ಲಿ ದೇವಾಲಯ ಲೋಕಾರ್ಪಣೆಗೊಳ್ಳಲಿದ್ದು ಇದಕ್ಕೆ ಸಕಲ ತಯಾರಿ ನಡೆಸಲಾಗುತ್ತಿದೆ. ನಾಳೆ ಪ್ರಧಾನಿ ಮೋದಿ ದುಬೈಗೆ 2 ದಿನದ ಪ್ರವಾಸ ಕೈಗೊಳ್ಳಲಿದ್ದು, ಇಸ್ಲಾಂ ರಾಷ್ಟ್ರದಲ್ಲಿ ಮೊದಲ ಹಿಂದೂ ದೇವಾಲಯವನ್ನು ಲೋಕಾರ್ಪಣೆ ಮಾಡಲು ಬಹಳ ಕಾತರರಾಗಿದ್ದಾರೆ.
27 ಎಕರೆ ಜಾಗ, 700 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರೋ ಈ ಹಿಂದೂ ದೇವಾಲಯವು ಅಕ್ಷರ ಪುರುಷೋತ್ತಮ ಸ್ವಾಮಿ ನಾರಾಯಣ ದೇವಸ್ಥಾನವಾಗಿದೆ. ಈ ದೇವಸ್ಥಾನವು ದುಬೈ-ಅಬುಧಾಬಿ ಶೇಖ್ ಜಾಯೆದ್ ಹೆದ್ದಾರಿಯ ಅಲ್ ರಹ್ಬಾ ಬಳಿ ಇರುವ ಅಬು ಮುರೇಖಾಹ್‌ನಲ್ಲಿದೆ.
ಅಷ್ಟೇ ಅಲ್ಲದೆ ಹೊರ ದೇಶದಲ್ಲಿ ನಿರ್ಮಾಣವಾಗುತ್ತಿರುವ ಮೊದಲ ಹಿಂದೂ ದೇವಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ದೇವಾಲಯವನ್ನು ಕಲ್ಲಿನಲ್ಲಿ ನಿರ್ಮಾಣ ಮಾಡಲಾಗಿದೆ. ಇದೆ ಫೆ. 14 ಅಂದ್ರೆ ಬುಧವಾರ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಹಂತ್ ಸ್ವಾಮಿ ಮಹಾರಾಜ್ ಅವರೊಂದಿನಿಗೆ ಈ ಭವ್ಯ ದೇವಾಲಯದ ಲೋಕಾರ್ಪಣೆ ನಡೆಯಲಿದೆ.
ಈ ಅದ್ಭುತ ಕ್ಷಣವನ್ನು ಕಣ್ಣು ತುಂಬಿಕೊಳ್ಳಲು ದುಬೈನಲ್ಲಿರುವ ಅನೇಕ ಭಾರತೀಯರು ಬಹಳ ಉತ್ಸುಹಕರಾಗಿದ್ದಾರೆ. ಅಷ್ಟೇ ಅಲ್ಲದೆ ಮೋದಿ ಅವರನ್ನು ನೋಡಲು ಸಹ ಕಾತರರಾಗಿದ್ದಾರೆ.