ಹೊಸದಿಗಂತ ಡಿಜಿಟಲ್ ಡೆಸ್ಕ್
ರಾಜ್ಯದಲ್ಲಿ ಹಿಜಾಬ್ ಸಂಘರ್ಷದ ನಡುವೆಯೂ ಇಂದು ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆ ಆರಂಭವಾಗಿದ್ದು, ರಾಜ್ಯದ 3,444 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು.
ಇನ್ನು ಮೊದಲ ದಿನ ಪರೀಕ್ಷೆ ಬರೆದರು, ಪರೀಕ್ಷೆಗೆ ಗೈರು ಹಾಜರಾದವರು ಎಷ್ಟು ನೋಡುವುದಾದರೆ, ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯಿಂದ ಮಾಹಿತಿ ಬಿಡುಗಡೆ ಮಾಡಿದ್ದು, 28-03-2022ರಂದು ನಿಗದಿತ ವೇಳಾಪಟ್ಟಿಯಂತೆ ಪ್ರಥಮ ಭಾಷೆ ವಿಷಯದ ಪರೀಕ್ಷೆ ರಾಜ್ಯದ 3,444 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಿತು.
ಪರೀಕ್ಷೆಗೆ ಸಂಖ್ಯೆ 8,69,399 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ಇವರಲ್ಲಿ 8,48,405 ವಿದ್ಯಾರ್ಥಿಗಳುಪರೀಕ್ಷೆಗೆ ಹಾಜರಾಗಿದ್ದು, 20,994 ವಿದ್ಯಾರ್ಥಿಗಳು ಇಂದಿನ ಪರೀಕ್ಷೆಗೆ ಗೈರು ಹಾಜರಾಗಿದ್ದಾರೆ. ಶೇಕಡಾವಾರು 97.59% ಆಗಿದೆ .ಇನ್ನೂ ಇಂದು ಮೊದಲ ಬಾರಿಗೆ ಪರೀಕ್ಷೆಗೆ ) 8,11,195 ವಿದ್ಯಾರ್ಥಿಗಳು ಹಾಜರಾದರು. ಮೊದಲ ಬಾರಿಗೆ ಪರೀಕ್ಷೆಗೆ ಹಾಜರಾದ ಖಾಸಗಿ ಅಭ್ಯರ್ಥಿಗಳ ಸಂಖ್ಯೆ 35,509 ಆಗಿದೆ. ಪರೀಕ್ಷೆಗೆ ಹಾಜರಾದಂತ ಒಟ್ಟು ಪುನರಾವರ್ತಿದ ಅಭ್ಯರ್ಥಿಗಳ ಸಂಖ್ಯೆ 1,701 ಆಗಿದೆ.
ಇನ್ನು ಯಾವುದೇ ಪರೀಕ್ಷಾ ಕೇಂದ್ರಗಳಲ್ಲಿಯೂ ಅವ್ಯವಹಾರದಲ್ಲಿ ಭಾಗಿಯಾದ ಪ್ರಕರಣ ವರದಿಯಾಗಿಲ್ಲ. ಇಂದಿನ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಹಾಜರಾದಂತ ವಿದ್ಯಾರ್ಥಿಗಳಲ್ಲಿ ಅನಾರೋಗ್ಯದ ಕಾರಣದಿಂದ ವಿಶೇಷ ಕೊಠಡಿಯಲ್ಲಿ ವಿದ್ಯಾರ್ಥಿಗಳನ್ನು ಪರೀಕ್ಷೆ ಬರೆಯೋದಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಹೀಗೆ ಪರೀಕ್ಷೆ ಬರೆದವರು 336 ಮಂದಿಯಾಗಿದ್ದಾರೆ. ಅಲ್ಲದೇ ಯಾವುದೇ ಕೋವಿಡ್ ಪಾಸಿಟಿವ್ ವಿದ್ಯಾರ್ಥಿಗಳು ಇಂದು ಪರೀಕ್ಷೆ ಬರೆದಿಲ್ಲ.