LIFE LESSON | ಯಾವುದೇ ಸಾಧನೆಗೂ ಮೊದಲ ಮೆಟ್ಟಿಲು” ತಾಳ್ಮೆ”, ಯಾಕಿಷ್ಟು ಮುಖ್ಯ ಗೊತ್ತಾ?

ತಾಳ್ಮೆ ಈ ಪದದಲ್ಲೆ ಎಷ್ಟು ತಾಳ್ಮೆಯಿದೆ ಅಲ್ವ. ಮನುಷ್ಯನಿಗೆ ಅವರವರ ಬದುಕಿನಲ್ಲಿ ತಾಳ್ಮೆ ಎಂಬುದು ಮಹತ್ವದ್ದು, ಪ್ರತಿಯೊಂದು ಕೆಲಸದ ಫಲ ಪಡೆಯಬೇಕು ಎಂದರೆ ತಾಳ್ಮೆ ಬೇಕೆ-ಬೇಕು.ತಾಳ್ಮೆ ಇಲ್ಲದಿದ್ದರೆ ಜೀವನದಲ್ಲಿ ಏನನ್ನು ಸಾಧನೆ ಮಾಡಲು ಮತ್ತು ನಮ್ಮ ಜೀವನದಲ್ಲಿಅಂದುಕೊಂಡದ್ದನ್ನು ಪಡೆಯಲು ಸಾಧ್ಯವಾಗುವುದಿಲ್ಲ.

ತಾಳ್ಮೆಯ ಮಹತ್ವವನ್ನು ನಾವೆಲ್ಲ ತಿಳಿಯಬೇಕು. ತಾಳ್ಮೆಯಿದ್ದರೆ ನಾವು ಎಂತಹ ಸಾಧನೆಯನ್ನಾದರು ಎಂತಹ ಶಿಖರವನ್ನಾದರು ಏರಬಹುದು ಆಗ ಜೀವನ ಸುಂದರವಾಗುತ್ತದೆ. ಯಾವುದೇ ವ್ಯಕ್ತಿ ಜೀವನದಲ್ಲಿ ಉತ್ತಮ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ ಎಂದರೆ ಅವರ ಜೀವನ ಅಷ್ಟು ಕಷ್ಟದ್ದಾಗಿರುತ್ತದೆ.

ಕಾಳನುದಯದಿ ಬಿತ್ತೆ ಸಂಜೆಗದು ಪೈರಹುದೆ
ಪಾಲುಂಟು ಕಾಲಂಗೆ ನಮ್ಮ ಕೃಷಿಗಳಲಿ
ವೇಳೆಗಡು ಮರೆತಾತುರದಿನ್ ಅಡುಗೆ ಪಕ್ಕುಹುದೆ?
ತಾಳುಮೆಯೆ ಪರಿಪಾಕ ಮಂಕುತಿಮ್ಮ.
ಈ ಗಾದೆ ಎಷ್ಟು ಅರ್ಥಪೂರ್ಣವಾಗಿದೆ ಎಂದರೆ ಇದರ ಸಾರಾಂಶ ನೋಡೋಣ ಬನ್ನಿ, ಬೆಳಗ್ಗೆ, ಕಾಳನ್ನು ಬಿತ್ತನೆ ಮಾಡುವುದು ಸಂಜೆಗೆ ಬೆಳೆ ಬರಲು ಸಾಧ್ಯ ಇದೆಯಾ? ಯಾವಾಗಲೂ ಒಂದು ಉದಾಹರಣೆ ನೆನಪು ಮಾಡಿಕೊಳ್ಳಬೇಕು.

ತಾಳ್ಮೆಯಿಂದ ಇರಲು ಕೆಲವು ಟಿಪ್ಸ್ ಇಲ್ಲಿವೆ:
ಬೆಳಗ್ಗೆ ಬೇಗ ಎದ್ದು ವ್ಯಾಯಾಮ ಮಾಡಬೇಕು.
15 ನಿಮಿಷ ಮೆಡಿಟೇಶನ್ ಮಾಡಬೇಕು.
ಪುಸ್ತಕ ಓದಬೇಕು.
ಒಳ್ಳೆಯ ಪುಸ್ತಕ ಓದಬೇಕು.
ಸಂದರ್ಭವನ್ನು ಜೀರ್ಣಿಸಿಕೊಂಡು ನಂತರ ರಿಯಾಕ್ಟ್‌ ಮಾಡಬೇಕು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!