ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ಹೊರಡಬೇಕಿದ್ದ ಏರ್ ಇಂಡಿಯಾ ವಿಮಾನ, ಬರೋಬ್ಬರಿ 20 ಗಂಟೆ ನಿಧಾನವಾಗಿ ಹೊರಟಿದೆ.
ಕಾಯುವ ಈ ಘಳಿಗೆಯಲ್ಲಿ ಪ್ರಯಾಣಿಕರು ಎಸಿ ಇಲ್ಲದೆ ಉಸಿರುಗಟ್ಟುವ ವಾತಾವರಣದಲ್ಲಿ ಪರಿತಪಿಸುವಂತಾಯಿತು. ಎಸಿ ಇಲ್ಲದೆ ವಿಮಾನದೊಳಗೆ ಕಾಯುತ್ತಿರುವಾಗ ಕೆಲವು ಮಂದಿ ಮೂರ್ಛೆ ತಪ್ಪಿ ಬಿದ್ದಿರುವ ಘಟನೆಯೂ ನಡೆಯಿತು.
ಎಸಿ ಇಲ್ಲದೆ ಪ್ರಯಾಣಿಕರು ಪರದಾಡುತ್ತಿರುವ ಫೋಟೊವನ್ನು ಪತ್ರಕರ್ತರೊಬ್ಬರು ಪೋಸ್ಟ್ ಮಾಡಿದ್ದಾರೆ. ಹವಾ ನಿಯಂತ್ರಣವಿಲ್ಲದೆ ಹಲವರು ಪರದಾಡಿದರು. ಈ ವೇಳೆ ಕೆಲವರು ಪ್ರಜ್ಞೆ ತಪ್ಪಿ ಬಿದ್ದಿದ್ದರು. ನಂತರ ಪ್ರಯಾಣಿಕರಿಗೆ ವಿಮಾನದಿಂದ ಅವರಿಗೆ ಕೆಳಗಿಳಿಯುವಂತೆ ಸೂಚಿಸಲಾಯಿತು ಎಂದು ಬರೆದುಕೊಂಡಿದ್ದಾರೆ.
ದೆಹಲಿಯಲ್ಲಿ ಉಷ್ಣಾಂಶ ದಾಖಲೆಯ ಮಟ್ಟಕ್ಕೆ ಏರಿದೆ. ಬುಧವಾರ ರಾಷ್ಟ್ರ ರಾಜಧಾನಿಯಲ್ಲಿ 52.9 ಡಿಗ್ರಿ ಸೆಲ್ಶಿಯಸ್ ತಾಪಮಾನ ಕಂಡು ಬಂದಿತ್ತು.