ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳ, ಗುಜರಾತ್ ಮತ್ತು ಮಹಾರಾಷ್ಟ್ರದ ನಂತರ ಇದೀಗ ಕರ್ನಾಟಕದಲ್ಲಿಯೂ ಅರಣ್ಯ ಇಲಾಖೆ ಹಾವುಗಳ ರಕ್ಷಣೆಗೆ ಕೈಪಿಡಿಯನ್ನು ಬಿಡುಗಡೆ ಮಾಡಿದೆ.
ರಾಜ್ಯದಲ್ಲಿ ಮಾನವ-ಹಾವು ಸಂಘರ್ಷಗಳನ್ನು ನಿಭಾಯಿಸಲು ಮತ್ತು ನಿಗದಿತ ವೈಜ್ಞಾನಿಕ ರೀತಿಯಲ್ಲಿ ಹಾವುಗಳನ್ನು ರಕ್ಷಿಸುವುದನ್ನು ಖಚಿತಪಡಿಸಿಕೊಳ್ಳಲು ಕರ್ನಾಟಕ ಅರಣ್ಯ ಇಲಾಖೆಯು ಹಾವು ರಕ್ಷಕರಿಗಾಗಿ ರಾಜ್ಯದ ಮೊದಲ ಕಾರ್ಯಚರಣಾ ಕೈಪಿಡಿಯನ್ನು ಬಿಡುಗಡೆ ಮಾಡಿದೆ.
ಪರಿಣಾಮಕಾರಿ ಮಾನವ-ಹಾವು ಸಂಘರ್ಷ ನಿರ್ವಹಣೆ ಮತ್ತು ತಗ್ಗಿಸುವಿಕೆ ಪ್ರಮಾಣೀಕೃತ ಹಾವು ರಕ್ಷಕರಿಗೆ ಕಾರ್ಯಾಚರಣೆ ಕೈಪಿಡಿ ಅನ್ನು ಹೆಸರಾಂತ ಹರ್ಪಿಲಾಜಿಸ್ಟ್ ರೂಮುಲಸ್ ವಿಟೇಕರ್, ಹರ್ಪಿಟಾಲಜಿಸ್ಟ್ ಮತ್ತು ದಿ ಲಿಯಾನಾ ಟ್ರಸ್ಟ್ ಸಂಸ್ಥಾಪಕ ಟ್ರಸ್ಟಿ ಗೆರಾರ್ಡ್ ಮಾರ್ಟಿನ್ ಮತ್ತು ಹ್ಯೂಮನ್ ಸೊಸೈಟಿ ಇಂಟರ್ನಾಷನಲ್ ಇಂಡಿಯಾ ಹಿರಿಯ ವ್ಯವಸ್ಥಾಪಕ ಸುಮಂತ್ ಬಿಂದು ಅವರು ರಚಿಸಿದ್ದಾರೆ.
ಹಾವು ರಕ್ಷಣೆ ಮಾಡುತ್ತಾ, ಹಾವುಗಳ ಕಡಿತಕ್ಕೆ ಜನ ಒಳಗಾಗುತ್ತಾರೆ. ಇದರಿಂದಾಗಿ ಹಾವು ರಕ್ಷಣೆಗೆ ಮುಂದಾಗುವುದನ್ನು ಕಡಿಮೆ ಮಾಡುತ್ತಾರೆ. ಸರಿಯಾದ ರೀತಿ ಎಲ್ಲರಿಗೂ ತಿಳಿದಿಲ್ಲ. ಇಂತವರಿಗಾಗಿ ಮಾರ್ಗಸೂಚಿಗಳು ಸಹಾಯ ಮಾಡುತ್ತವೆ. ರಕ್ಷಕರಿಗೆ ಅರಣ್ಯ ಇಲಾಖೆಯಿಂದ ತರಬೇತಿ ನೀಡಿ ಪ್ರಮಾಣೀಕರಿಸಲಾಗುವುದು ಎಂದು ಸುಮಂತ್ ಬಿಂದು ಹೇಳಿದ್ದಾರೆ.