ʼಚುನಾವಣೆ ಹತ್ತಿರುವಿರುವಾಗ ಪ್ರಧಾನಿಯವರ ʻಒಂದು ದೇಶ, ಒಂದು ಚುನಾವಣೆʼ ಸಮಿತಿ ರಚನೆ ಅನುಮಾನ ಹುಟ್ಟಿಸಿದೆʼ

ಹೊಸದಿಗಂತ ವರದಿ ಹುಬ್ಬಳ್ಳಿ:

ಲೋಕಸಭಾ ಚುನಾವಣೆ ಸಮೀಸುತ್ತಿರುವಾಗ ಪ್ರಧಾನಿ ಮೋದಿಯವರ ʻಒಂದು ದೇಶ, ಒಂದು ಚುನಾವಣೆʼ ಸಮಿತಿ ರಚನೆ ಅನುಮಾನ ಹುಟ್ಟಿಸಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಲ್ಕು ವರ್ಷ ಸುಮ್ಮನಿದ್ದ ಕೇಂದ್ರ ಸರ್ಕಾರ ಮಾಜಿ ರಾಷ್ಟ್ರ ಪತಿ ರಾಮನಾಥ ಕೋವಿಂದ ಅವರ ನೇತೃತ್ವದಲ್ಲಿ ಸಮಿತಿ ಮಾಡಿದ್ದು, ಕೇಂದ್ರ ಸರ್ಕಾರದ ಲೋಕಸಭಾ ಅವಧಿ ವಿಸ್ತಾರ ಮಾಡಿ ಚುನಾವಣೆ ಮುಂದೂಡುವ ದುರುದ್ದೇಶವಿದೆ ಎಂದರು.

ಸಂವಿಧಾನ ಬದಲಿಸಿ ಲೋಕಸಭಾ ಚುನಾವಣೆ ಮುಂದೂಡಿದರೆ ಜನರು ಸುಮ್ಮನ್ನಿರಲ್ಲ. ಸಮಿತಿಯಲ್ಲಿ ಸುಪ್ರೀಂ ಕೋಟ್೯ ನ್ಯಾಯಾಧೀಶರು ನೇಮಕ ಮಾಡಬೇಕಿತ್ತು. ಪಕ್ಷಾತೀತವಿದ್ದ ಎಷ್ಟೊಂದು ಜನರಿದ್ದಾರೆ ಅಂಥವರನ್ನು ನೇಮಕ ಮಾಡಿಕೊಳ್ಳಬೇಕಿತ್ತು. ಕೇಂದ್ರ ಸರ್ಕಾರ ಇಟ್ಟ ಹೆಜ್ಜೆಯಲ್ಲಿ ಸಾಕಷ್ಟು ಅನುಮಾನಗಳಿವೆ ಎಂದು ಹೇಳಿದರು.

ಕರ್ನಾಟಕ ಚುನಾವಣೆ ಬಳಿಕ ಬಿಜೆಪಿ ವಿಶ್ವಾಸ ಕಳೆದುಕೊಂಡಿದೆ. ರಾಜ್ಯದಲ್ಲಿ ಅವರ ಪರಿಸ್ಥಿತಿ ಹದಗೆಡುತ್ತಿದೆ. ಐದು ಗ್ಯಾರಂಟಿ ಯಶಸ್ಸು ನೋಡಿ ಕೇಂದ್ರ ಸರ್ಕಾರ ಭಯದಿಂದ ಬೆಲೆ ಇಳಿಕೆ ಮಾಡುತ್ತಿದೆ ಎಂದರು.

ಕಾವೇರಿ ರಾಜಕೀಯ ಮಾಡುತ್ತಿದೆ ದೇವೆಗೌಡರ ಹೇಳಿಕೆ ಪ್ರತಿಕ್ರಿಯಿಸಿ, ಕರ್ನಾಟಕ ಹಿತ ರಕ್ಷಣೆಗೆ ಕಾನೂನು ಹೋರಾಟ ಮಾಡಿದ್ದೇವೆ. ಹೋರಾಟ ಎಲ್ಲ ಪಕ್ಷ ಸಭೆ ಕರೆದು ಮಾರ್ಗದರ್ಶನ ಪಡೆದಿದ್ದೇವೆ. ಇದರಲ್ಲಿ ಯಾವುದೇ ರಾಜಕಾಣವಿಲ್ಲ ಎಂದರು.

ಸಂಕಷ್ಟ ಸೂತ್ರ ಮಾಡುವುದು ಸರ್ಕಾರ ಉದ್ದೇಶವಿದೆ‌. ಬಿಜೆಪಿ ನಾಯಕರು ಕಾಂಗ್ರೆಸ್ ಬರಲು ಅಭಿಪ್ರಾಯ ಪಡುತ್ತಿದ್ದಾರೆ. ಸಮಾಜದಲ್ಲಿ ಬಡವರ ಪರ ಮನಸ್ಥಿತಿ ಇರುವವರು ಪಕ್ಷಕ್ಕೆ ಬರುವವರು ಆಸಕ್ತರಾಗಿದ್ದಾರೆ. ಅವರು ಪಕ್ಷಕ್ಕೆ ಬಂದರೆ ಸೇರಿಸಿಕೊಳ್ಳಲಾಗುವುದು ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!