Friday, December 19, 2025

ರಾಜಕೀಯದಲ್ಲಿ ಅತ್ಯಂತ ಭ್ರಷ್ಟ ಕುಟುಂಬ ಅಂದ್ರೆ ಗಾಂಧಿ ಕುಟುಂಬ: ಗೌರವ್ ಭಾಟಿಯಾ ಆರೋಪ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜಕೀಯದಲ್ಲಿ ಅತ್ಯಂತ ಭ್ರಷ್ಟ ಕುಟುಂಬ ಅಂದ್ರೆ ಅದು ಗಾಂಧಿ ಕುಟುಂಬ, ಸುಮಾರು 2,000 ಕೋಟಿ ರೂ. ಮೌಲ್ಯದ ಆಸ್ತಿಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಬಿಜೆಪಿ (BJP) ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಆರೋಪಿಸಿದ್ದಾರೆ.

ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ನ್ಯಾಯಾಲಯದ ತೀರ್ಪನ್ನು ಕ್ಲೀನ್ ಚಿಟ್ ಎಂದು ಬಿಂಬಿಸುವ ಮೂಲಕ ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದ್ದಾರೆ. ಈ ಆದೇಶವು ಆರೋಪಗಳ ಅರ್ಹತೆಯ ಮೇಲೆ ಅಲ್ಲ, ಕಾನೂನು ಮತ್ತು ತಾಂತ್ರಿಕ ಆಧಾರದ ಮೇಲೆ ನೀಡಲಾಗಿದೆ ಎಂದು ವಾದಿಸಿದ್ದಾರೆ.

ಅತ್ಯಂತ ಭ್ರಷ್ಟರು ಯಾರಾದರೂ ಇದ್ದರೆ ಅದು ಗಾಂಧಿ ಕುಟುಂಬ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ರಾಬರ್ಟ್ ವಾದ್ರಾ ವಂಚನೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿದ್ದಾರೆ. ಹಲವು ಬಾರಿ ನ್ಯಾಯಾಲಯವನ್ನು ಸಂಪರ್ಕಿಸಿದರೂ ಕೂಡ ಗಾಂಧಿ ಕುಟುಂಬಕ್ಕೆ ಯಾವುದೇ ಕಾನೂನು ಪರಿಹಾರ ಸಿಕ್ಕಿಲ್ಲ. ಇದೇ ವೇಳೆ ರಾಜಕೀಯ ದುರುದ್ದೇಶದ ಆರೋಪಗಳನ್ನು ಅವರು ತಿರಸ್ಕರಿಸಿದ್ದಾರೆ ಎಂದರು.

error: Content is protected !!