ಹೊಸ ದಿಗಂತ ವರದಿ,ಮಂಗಳೂರು:
ಶಿರೂರು ಮಠದ ಶ್ರೀ ವೇದವರ್ಧನತೀರ್ಥರ ಚೊಚ್ಚಲ ಪರ್ಯಾಯದ ಪೂರ್ವಭಾವಿಯಾಗಿ ಅಕ್ಕಿ ಮುಹೂರ್ತ ಉಡುಪಿ ಶಿರೂರು ಮಠದಲ್ಲಿ ಸಂಭ್ರಮದಿಂದ ನಡೆಯಿತು.
ವಿಶೇಷವೇನೆಂದರೆ ಅತಿ ಕಿರಿ ವಯಸ್ಸಿನ ಶ್ರೀಗಳ ಪರ್ಯಾಯ ಪೂರ್ವಭಾವಿ ಅಕ್ಕಿ ಮಹೂರ್ತಕ್ಕೆ ಅಷ್ಟಮಠಗಳ ಯತಿಗಳು ಮತ್ತೆ ಒಂದಾದರು. ಅಕ್ಕಿಗೆ ಪೂಜೆ ಮಾಡಿ, ಆಶೀರ್ವಾದಗೈದರು.
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಪುತ್ತಿಗೆ ಮಠದ ಪರ್ಯಾಯ ಮಹೋತ್ಸವ ನಡೆಯುತ್ತಿದೆ. ಮುಂದಿನ ಜನವರಿ ನಂತರ ಕೃಷ್ಣನ ಪೂಜಾಧಿಕಾರ, ಅಷ್ಟಮಠಗಳಲ್ಲೇ ಕಿರಿಯ ಶ್ರೀಗಳಾದ ಶಿರೂರು ಮಠದ ವೇದವರ್ಧನ ತೀರ್ಥ ಶ್ರೀಗಳಿಗೆ ಸಿಗಲಿದೆ.
ಇಂದು ಪರ್ಯಾಯ ಮಹೂರ್ತದ ಪೂರ್ವಭಾವಿ ಅಕ್ಕಿ ಮಹೂರ್ತವನ್ನು ಶೀರೂರು ಮಠ ಶಾಸ್ತ್ರೋಕ್ತವಾಗಿ, ಅದ್ದೂರಿಯಾಗಿ ನೆರವೇರಿಸಿತು.
ಶಿರೂರು ಲಕ್ಷ್ಮೀವರ ತೀರ್ಥ ಶ್ರೀಪಾದರ ಸಾವಿನ ನಂತರ ಉಳಿದ ಮಠಗಳು ಶಿರೂರು ಮಠದ ಜೊತೆ ಅಂತರ ಕಾಯ್ದುಕೊಂಡಿದ್ದವು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಜೊತೆಯಾಗುತ್ತಿತ್ತು.
ಇಂದು 7 ವರ್ಷದ ನಂತರ 8 ಮಠಗಳ ಸ್ವಾಮೀಜಿಗಳು ಶಿರೂರು ಮಠಕ್ಕೆ ಪ್ರವೇಶಿಸಿ ಅಕ್ಕಿ ಮಹೂರ್ತದಲ್ಲಿ ಭಾಗಿಯಾದರು. ಪರ್ಯಾಯ ಪೀಠ ಏರಲಿರುವ ಅತಿ ಕಿರಿಯ ಶ್ರೀಗಳಿಗೆ ಈ ಮೂಲಕ ಆಶೀರ್ವದಿಸಿ ಧೈರ್ಯ ತುಂಬಿದ್ದಾರೆ.