ಹೊಸದಿಗಂತ ಡಿಜಿಟಲ್ ಡೆಸ್ಕ್:
ರೀಲ್ಸ್ ಮಾಡುವ ಭರದಲ್ಲಿ ಇಬ್ಬರು ಹುಡುಗಿಯರು ಕಾಲು ಜಾರಿ ಜಲಪಾತಕ್ಕೆ ಬಿದ್ದ ಘಟನೆ ಮಲ್ಕನ್ಗಿರಿ ಜಿಲ್ಲೆಯಲ್ಲಿ ನಡೆದಿದೆ. ಗೊಬಿಂದಪಾಲಿ ಜಿಲ್ಲೆಯ ಗುಮ್ಮಜ್ಹಾರ ಜಲಪಾತದಲ್ಲಿ ಈ ಘಟನೆ ನಡೆದಿದೆ.
ಹುಡುಗಿಯರು ಜಲಪಾತಕ್ಕೆ ಬಿದ್ದಿರುವುದನ್ನು ಸ್ಥಳೀಯರು ನೋಡಿದ್ದಾರೆ. ಕೂಡಲೇ ಅವರನ್ನು ರಕ್ಷಿಸಲು ನದಿಗೆ ಹಾರಿದ್ದಾರೆ.
ಜೀತು ಗೌಡ ಮತ್ತು ದೀಪಕ್ ಗೌಡ ಎಂಬ ಇಬ್ಬರು, ಹುಡುಗಿಯರು ಜಲಪಾತಕ್ಕೆ ಜಾರುತ್ತಿರುವುದನ್ನು ಗಮನಿಸಿ ತಕ್ಷಣ ನೀರಿಗೆ ಹಾರಿ ಇಬ್ಬರು ಹುಡುಗಿಯರನ್ನು ಪ್ರಾಣಾಪಾಯದಿಂದ ರಕ್ಷಿಸಲಾಗಿದೆ.