ಮೇಕೆದಾಟು ಯೋಜನೆ: ವಿಧಾನ ಪರಿಷತ್​​ನಲ್ಲೂ ಖಂಡನಾ ನಿರ್ಣಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಮೇಕೆದಾಟು ಯೋಜನೆ ವಿರೋಧಿಸಿ ರಾಜ್ಯ ಸರ್ಕಾರ ಕೈಗೊಂಡ ಖಂಡನಾ ನಿರ್ಣಯಕ್ಕೆ ವಿಧಾನ ಪರಿಷತ್​ ಸಹ ಸರ್ವಾನುಮತದಿಂದ ಅಂಗೀಕರಿಸಿದೆ.
ಕಲಾಪ ಪ್ರಾರಂಭ ಆಗುತ್ತಿದ್ದಂತೆ ಮೇಕೆದಾಟು ಯೋಜನೆ ವಿರುದ್ಧ ತಮಿಳುನಾಡು ಸರ್ಕಾರ ತೆಗೆದುಕೊಂಡಿದ್ದ ನಿರ್ಣಯಕ್ಕೆ ಖಂಡನಾ ನಿರ್ಣಯ ಮಂಡಿಸಲಾಯಿತು.ಕಾನೂನು ಸಚಿವ ಮಾಧುಸ್ವಾಮಿ ಪರಿಷತ್‌ನಲ್ಲಿ ಈ ನಿರ್ಣಯ ಮಂಡಿಸಿದರು.
ಸರ್ಕಾರದ ನಿರ್ಣಯ ಸ್ವಾಗತಿಸಿರುವ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ಪಾದಯಾತ್ರೆ ಮಾಡಿತ್ತು. ಸರ್ಕಾರದ ನಿರ್ಣಯವನ್ನು ಸರ್ವಾನುಮತದಿಂದ ಕಾಂಗ್ರೆಸ್ ಒಪ್ಪಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!