ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಪೊಲೀಸ್ ತನಿಖೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ದರ್ಶನ್ ಸಹೋದರಿ ದಿವ್ಯಾ ಅವರ ಪತಿ ಮಂಜುನಾಥ್ ಮೊದಲ ಬಾರಿಗೆ ಮಾತನಾಡಿದರು.
ಅವರನ್ನು ಕೆರಳಿಸಿ ಈ ಸ್ಥಿತಿಗೆ ತರಲಾಯಿತು. ಅವನ ಸ್ವಭಾವ ಹಾಗಲ್ಲ. ಅವನು ಬಹಳ ಮೃದು ಸ್ವಭಾವದವನು. ಬೇಕಂತನೇ ಈ ರೀತಿ ವರ್ತಿಸುವಂತೆ ಒತ್ತಾಯಿಸಿದ್ದಾರೆ. ಆತನ ಒಳ್ಳೆತನವೇ ಅವನನ್ನು ಕಾಪಾಡುತ್ತದೆ ಎಂದು ಹೇಳಿದ್ದಾರೆ.
ಎಲ್ಲಾ ನಿರ್ಧಾರಗಳನ್ನು ನ್ಯಾಯಾಲಯವು ತೆಗೆದುಕೊಳ್ಳುತ್ತದೆ. ಅವರ ಲೈಫ್ ಅವರು ಚೆನ್ನಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ನೋಡೋರು ಬೇರೆ ಥರ ತಿಳಿದುಕೊಂಡಿದ್ದಾರೆ. ಜನರೆಲ್ಲಾ ಶಾಂತರಾಗಿರಬೇಕು. ಒಳ್ಳೆಯ ತೀರ್ಮಾನ ಬಂದು ಸರಿ ಹೋಗುತ್ತದೆ. ಅಲ್ಲಿಯವರೆಗೆ ಶಾಂತಿ ಕಾಪಾಡಿಕೊಂಡು ಅಭಿಮಾನಿಗಳು ಸಂತೋಷವಾಗಿರಬೇಕು. ಡಿ ಬಾಸ್ ಮತ್ತೆ ಬರುತ್ತಾರೆ. ಅಲ್ಲಿಯವರೆಗೆ ಶಾಂತಿ ಕಾಪಾಡಿಕೊಂಡು ಖುಷಿಯಾಗಿ ಇರಬೇಕು ಎಂದಿದ್ದಾರೆ.