ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೆಚ್ಚುವರಿ ಐದು ಕೆಜಿ ಅಕ್ಕಿಗೆ ನೀಡಲಾಗುತ್ತಿದ್ದ ಹಣದ ಬದಲಾಗಿ ಈ ತಿಂಗಳಿನಿಂದಲೇ ಅಕ್ಕಿ ಕೊಡೋದಾಗಿ ಹೇಳಿದ್ದ ಸರಕಾರ ಯು ಟರ್ನ್ ಹೊಡೆದಿದ್ದು, ಈ ತಿಂಗಳು ಇಲ್ಲ. ಏಪ್ರಿಲ್ ನಿಂದ ಕೊಡುವುದಾಗಿ ಸಚಿವ ಕೆ.ಹೆಚ್ ಮುನಿಯಪ್ಪ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ನಮ್ಮ ಬಳಿ ಅಕ್ಕಿ ಇದೆ. ಕೇಂದ್ರ ಸರ್ಕಾರವೂ ಅಕ್ಕಿ ಕೊಡಲು ಸಿದ್ಧವಿದೆ. ಆದರೇ ಈ ತಿಂಗಳ ಬದಲಾಗಿ ಏಪ್ರಿಲ್ ನಿಂದ ಬಿಪಿಎಲ್ ಕಾರ್ಡ್ ದಾರರಿಗೆ 10 ಕೆಜಿ ಅಕ್ಕಿ ಕೊಡುವುದಾಗಿ ತಿಳಿಸಿದರು.
ಕಳೆದ ತಿಂಗಳಿನಿಂದ ನಮ್ಮ ಬಳಿ ಅಕ್ಕಿ ಇದೆ. ನಾವು ನಿರ್ಣಯ ಮಾಡಿದಂತೆ ಹೆಚ್ಚುವರಿ ಅಕ್ಕಿಗೆ ಅಕ್ಕಿ ಕೊರತೆಯ ಕಾರಣ ಹಣ ನೀಡಲಾಗಿತ್ತು. ಇದೀಗ ಕೇಂದ್ರ ಸರ್ಕಾರವೂ ಅಕ್ಕಿ ಕೊಡೋದಕ್ಕೆ ಸಿದ್ಧವಿದೆ. ಈ ಹಿನ್ನಲೆಯಲ್ಲಿ ಏಪ್ರಿಲ್ ನಿಂದ 10 ಕೆಜಿ ಅಕ್ಕಿ ಕೊಡುವುದಾಗಿ ಹೇಳಿದರು.