ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರೀತಿಗೆ ವಯಸ್ಸಿಲ್ಲ, ಯಾವ ಏಜ್‌ನಲ್ಲಾದರೂ ಪ್ರೀತಿ ಚಿಗುರಬಹುದು ಆದರೆ ಪ್ರೀತಿ ಉಳಿಯೋದು ಮುಖ್ಯವಷ್ಟೇ!
ಬೆಂಗಳೂರಿನಲ್ಲಿ 63 ವರ್ಷದ ವೃದ್ಧೆಗೆ 70 ವರ್ಷದ ವೃದ್ಧನೊಬ್ಬ ಪ್ರೀತಿಸಿ, ಮದುವೆಯಾಗುವುದಾಗಿ ಹೇಳಿ ನಂತರ ಕೈಕೊಟ್ಟಿದ್ದಾನೆ. ಇದರಿಂದ ಬೇಸತ್ತ ವೃದ್ಧೆ ಪೊಲೀಸರ ಮೊರೆ ಹೋಗಿದ್ದಾರೆ.
ದಯವಾಣಿ ಹಾಗೂ ಲೋಕನಾಥ್ ಪ್ರೀತಿಸುತ್ತಿದ್ದರು, ಸಿನಿಮಾ, ಟ್ರಿಪ್ ಎಂದು ಓಡಾಟ ಮಾಡಿದ್ದರು. ಮದುವೆಯಾಗುವುದಾಗಿ ಲೋಕನಾಥ್ ಹೇಳಿದ್ದರು. ಆದರೆ ಇದ್ದಕ್ಕಿದ್ದಂತೆಯೇ ಲೋಕನಾಥ್ ದಯವಾಣಿಯನ್ನು ಅವಾಯ್ಡ್ ಮಾಡಿದ್ದಾರೆ. ಫೋನ್ ಎತ್ತದೇ ನಿರ್ಲಕ್ಷ್ಯ ಮಾಡಿದ್ದಾರೆ.
ದಯವಾಣಿ ಲೋಕನಾಥ್‌ರನ್ನು ಭೇಟಿ ಮಾಡಿ ಯಾಕೆ ಹೀಗೆ ಮಾಡ್ತಿದ್ದೀರಿ ಎಂದು ಕೇಳಿದ್ದಾರೆ. ಆಗ ಅವಾಚ್ಯ ಶಬ್ದಗಳಿಂದ ನಿಂದಿಸಿ ಮತ್ತೆ ಕರೆ ಮಾಡಿದರೆ ಕೊಲೆ ಮಾಡ್ತೀನಿ ಎಂದು ಬೆದರಿಸಿದ್ದಾರೆ. ಮೋಸಹೋದ ದಯವಾಣಿ ಈಸ್ಟ್‌ಝೋನ್ ವುಮೆನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.