ವಾಸ್ತುಪ್ರಕಾರ ಯಾವ ವಸ್ತುಗಳು ಎಲ್ಲಿ ಇರಬೇಕೋ ಅಲ್ಲಿ ಇರಬೇಕು, ಇಲ್ಲವಾದರೆ ಮನೆಯಲ್ಲಿ ಒಂದಲ್ಲಾ ಒಂದು ರೀತಿಯ ಸಮಸ್ಯೆ ಬಾಧಿಸುತ್ತದೆ ಎನ್ನಲಾಗುತ್ತದೆ. ಅದರಂತೆಯೇ ಅಡುಗೆ ಮನೆಯಲ್ಲಿ ಈ ಒಂದು ವಸ್ತುವನ್ನು ಇಡಬೇಡಿ. ಇದರಿಂದ ಮನೆಯಲ್ಲಿರುವ ಎಲ್ಲರ ಆರೋಗ್ಯ ಬಾಧಿಸುತ್ತದೆ.
ಯಾವ ವಸ್ತು?
ಸಾಮಾನ್ಯವಾಗಿ ಮನೆಯಲ್ಲಿ, ಅದರಲ್ಲಿಯೂ ಅಡುಗೆ ಮನೆಯಲ್ಲಿ ಫಸ್ಟ್ ಏಡ್ ಬಾಕ್ಸ್ ಇರುತ್ತದೆ. ಪ್ರತಿದಿನ ಕುಡಿಯುವ ಮಾತ್ರೆಗಳನ್ನು ಅಡುಗೆ ಮನೆಯಲ್ಲಿಯೇ ಇಡುತ್ತೇವೆ. ಈ ರೀತಿ ಮಾತ್ರೆಗಳನ್ನು ಇಟ್ಟುಕೊಂಡರೆ ಮನೆಯಲ್ಲಿ ಎಲ್ಲರ ಆರೋಗ್ಯ ಹದಗೆಡುತ್ತದೆ. ಹೀಗಾಗಿ ಅಡುಗೆ ಮನೆಯಲ್ಲಿ ಮಾತ್ರೆಗಳು, ಮೆಡಿಸಿನ್ ಹಾಗೂ ಇತರೆ ಕಿಟ್‌ಗಳನ್ನು ಬಳಕೆ ಮಾಡಬೇಡಿ.