ಹೊಸದಿಗಂತ ವರದಿ ಬೆಳಗಾವಿ :
ವಿಧಾನ ಮಂಡಳ ಅಧಿವೇಶದಲ್ಲಿ ಭಾಗಿಯಾಗಿದ್ದ ಬಳಿಕ ಮಧ್ಯಾಹ್ನ ಬೆಳಗಾವಿಯಿಂದ ಬೆಂಗಳೂರಿಗೆ ಹೋಗುತ್ತಿರುವಾಗ ಇಂಧನ ಸಚಿವ ಕೆಜೆ ಜಾರ್ಜ್ ಪ್ರಯಾಣಿಸುತ್ತಿದ್ದ ಹೆಲಿಕ್ಯಾಪ್ಟರ್ ತಾಂತ್ರಿಕ ದೋಷದಿಂದ ತುರ್ತು ಭೂಸ್ಪರ್ಶ ವಾಗಿರುಯವ ಘಟನೆ ನಡೆಯಿತು.
ಶುಕ್ರವಾರ ಬೆಂಗಳೂರಿಗೆ ಹೋಗುವಾಗ ಪೈಲೆಟ್ ಹೆಲಿಕ್ಯಾಪ್ಟರ್ ನಲ್ಲಿ ದೋಷ ಕಂಡು ಅದನ್ನು ಚಿಕ್ಕಮಂಗಳೂರಿನ ಬಳಿ ತುರ್ತು ಭೂಸ್ಪರ್ಶ ಮಾಡಿದ್ದಾರೆ.
ಘಟನೆಯಲ್ಲಿ ಯಾವುದೇ ಅನಾಹೂತಗಳ ಸಂಭವಿಸಿಲ್ಲ, ಸಚಿವರು ಸುರಕ್ಷಿತರಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸಿಂಗಲ್ ಇಂಜಿನ್ ಹೆಲಿಕ್ಯಾಪ್ಟರ್ ಬೆಂಗಳೂರು ಜೊತೆ ಬರುವಾಗ ಬಲವಾದ ಗಾಳಿ ಮತ್ತು ಪ್ರತಿಕೂಲ ಹವಾಮಾನದಿಂದ ಮುಂದೆ ಸಾಗದೆ ಹತ್ತಿರದ ಪ್ರದೇಶದಲ್ಲಿ ಚಿಕ್ಕಮಂಗಳೂರು ಬಳಿಯ ಖಾಲಿ ಜಮೀನಲ್ಲಿ ಸುರಕ್ಷಿತವಾಗಿ ಇಳಿಸಿದ್ದಾರೆ ಎನ್ನಲಾಗಿದೆ.
ಕೆಜೆ ಜಾರ್ಜ್ ಪ್ರಯಾಣಿಸುತ್ತಿದ್ದ ಹೆಲಿಕ್ಯಾಪ್ಟರ್ ತುರ್ತು ಭೂಸ್ಪರ್ಶ

