ಹೈಕೋಟ್ ಆದೇಶವನ್ನು ಎಲ್ಲರೂ ಪರಿಪಾಲನೆ ಮಾಡಬೇಕು,ಮತ್ತೆ ಮತ್ತೆ ಚೋದನೆ ನೀಡಬಾರದು:ಸಿಎಂ ಬೊಮ್ಮಾಯಿ

ಹೊಸದಿಗಂತ ವರದಿ, ಹಾವೇರಿ:

ಹೈಕೋಟ್ ಆದೇಶವನ್ನು ಎಲ್ಲರೂ ಪರಿಪಾಲನೆ ಮಾಡಬೇಕು. ಮತ್ತೆ ಮತ್ತೆ ಅದಕ್ಕೆ ಪ್ರಚೋದನೆ ನೀಡಬಾರದು ಎನ್ನುವುದು ಜನತೆಯ ಆಶಯವಾಗಿದೆ. ಈ ನೆಲದ ಕಾನೂನನ್ನು ಎಲಕ್ಲರೂ ಪಾಲನೆ ಮಾಡಿದರೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಜಿಲ್ಲೆಯ ಸವಣೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎಪ್ಪತ್ತು ರ್ವಗಳಿಂದ ಶಾಲೆಗಳಲ್ಲಿ ಸಮ ವಸ್ತ್ರಗಳನ್ನು ದರಿಸುತ್ತ ಎಲ್ಲರೂ ಅತ್ಯಂತ ಭಾವೈಖ್ಯೆಯಿಂದ ಬದುಕುತ್ತಿದ್ದವು. ಇತ್ತೀಚೆಗೆ ಯಾರದೋ ಪ್ರಚೋದನೆಯಿಂದ ಕೆಲ ಘಟನೆಗಳು ಸಂಭವಿಸುತ್ತಿವೆ. ಆದರೂ ನಮ್ಮ ಅಧಿಕಾರಿಗಳು ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಶಾಲಾ ಸಮ ವಸ್ತ್ರದ ಪ್ರಶ್ನೆಯಾಗಿದೆ. ಹೈಕೋರ್ಟ್ ಆದೇಶವಿದೆ ಇದರ ಬದಲಿಗೆ ಬೇರೆ ಬೇರೆ ವಿಷಯಗಳಿಗೆ ಮಾತನಾಡುವ ಮೂಲಕ ಪ್ರಚೋದನೆ ನೀಡುವುದು ಸರಿಯಾದುದಲ್ಲ ಎಂದರು.
ಮುಜರಾಯಿ ಇಲಾಖೆಯ ದೇವಸ್ಥಾನಗಳ ಆಸ್ತಿಗಳನ್ನು ಬೇರೆ ಧರ್ಮಿಯರ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂದು ೨೦೦೨ರ ಧರ್ಮ ದತ್ತಿ ಕಾನೂನಿನಲ್ಲಿ ಉಲ್ಲೇಖವಿದೆ. ಇದೇನು ಮೊದಲನೆ ಸಾರಿಯಲ್ಲ. ಎಲ್ಲರು ಶಾಂತಿಯಿಂದ ಮಾತುಕತೆ ಮೂಲಕ ಪರಿಹರಿಸಿಕೊಂಡರೆ ಎಲ್ಲವೂ ಪರಿಹಾರವಾಗುತ್ತವೆ ಎಂದು ತಿಳಿಸಿದರು.
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಅವರು ಎರಡನೇ ಬಾರಿ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವಿಕಾರ ಸಮಾರಂಭ ಅಭೂತ ಪೂರ್ವವಾಗಿ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಹಾಗೂ ಅಪಾರ ಜನದಟ್ಟಣೆ ನಡುವೆ ಜರುಗಿತು. ನಾಲ್ಕು ರಾಜ್ಯಗಳ ಚುನಾವಣೆಯ ನಂತರ ಇಡೀ ದೇಶದಲ್ಲಿ ಹೊಸ ರಾಜಕೀಯ ಸಂಚಲನ ನಿರ್ಮಾಣವಾಗಿರುವುದು ಕಂಡುಬರುತ್ತಿದೆ. ದೇಶದ ನಾಲ್ಕು ದಿಕ್ಕುಗಳಲ್ಲಿಯೂ ಬಿಜೆಪಿಗೆ ಜನತೆ ಬೆಂಬಲವನ್ನು ನೀಡಿದ್ದಾರೆ. ಇದು ೨೦೨೪ರ ಲೋಕಸಭಾ ಚುನಾವಣೆಗೆ ದುಕ್ಸೂಚಿ ಎನ್ನುವುದು ಸ್ಪಷ್ಟವಾಗಿದೆ. ಪ್ರಸಕ್ತ ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಜನತೆಯ ಬೆಂಬಲ ದೊರೆಯುವುದು ವ್ಯಕ್ತವಾಗುತ್ತಿದೆ. ರಾಜ್ಯದಲ್ಲಿಯೂ ೨೦೨೩ರ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಪಡೆಯುವ ಮೂಲಕ ಸ್ವಂತ ಶಕ್ತಿಯಿಂದ, ಜನತೆಯ ಆಶೀರ್ವಾದಿಂದ ಮತ್ತೆ ಆಡಳಿತದ ಚುಕ್ಕಾಣೆಯನ್ನು ಹಿಡಿಯುವಲ್ಲಿ ಸಂಪೂರ್ಣವಾಗಿ ಯಶಸ್ವಿ ಆಗುತ್ತೇವೆ ಎಂಬ ವಿಶ್ವಾಸ ನನಗಿದೆ.
ಶಿಗ್ಗಾಂವ ಕ್ಷೇತ್ರದ ಜನತೆ ಹಿಂದಿಗಿಂತಲೂ ಈಗ ಹೆಚ್ಚಿನ ಪ್ರೀತಿ, ವಿಶ್ವಾಸವನ್ನು ತೋರಿಸುತ್ತಿದ್ದಾರೆ ಹೀಗಾಗಿ ಶಿಗ್ಗಾಂವ ಕ್ಷೇತ್ರವನ್ನು ಬಿಟ್ಟು ಬೇರೆ ಕ್ಷೇತ್ರದಿಂದ ಸ್ಪರ್ಧಿಸುವ ಪ್ರಶ್ನೆ ಬರುವುದೇ ಇಲ್ಲ ಎಂದು ಸ್ಪಷ್ಟಪಡಿಸಿದರು. ಮುಖ್ಯಮಂತ್ರಿಗಳು ಡಾವಣೆಗೇರಿ ಉತ್ತರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂದು ಇತ್ತೀಚೆಗೆ ಕೇಳಿಬಂದ ಮಾತುಗಳಿಗೆ ಮೇಲಿನಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಪಷ್ಟಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!