ಹೊಸದಿಗಂತ ಡಿಜಿಟಲ್ ಡೆಸ್ಕ್:
ತುಮಕೂರು ಜಿಲ್ಲೆ ಪಾವಗಡ ಪಟ್ಟಣದ ಐತಿಹಾಸಿಕ ಹಿನ್ನೆಲೆ ಇರುವ 7 ಸುತ್ತಿನ ಕೋಟೆಯ ಗೋಡೆ ಕುಸಿದಿದೆ. ಧಾರಾಕಾರ ಮಳೆಗೆ ರಾಜರ ಕಾಲದಲ್ಲಿ ನಿರ್ಮಾಣವಾಗಿದ್ದ ಏಳು ಸುತ್ತಿನ ಕೋಟೆಯಲ್ಲಿ ಮೊದಲ ಸುತ್ತಿನ ಗೋಡೆ ಕುಸಿದಿದೆ.
ಕೋಟೆ ಒಂದು ಭಾಗ ಕುಸಿತ ಹಿನ್ನೆಲೆ ಜಾಗ ಕಬಳಿಸುವ ಆತಂಕ ಎದುರಾಗಿದೆ. ಕೋಟೆಯನ್ನ ಉಳಿಸುವಂತೆ ತಾಲೂಕು ಆಡಳಿತಕ್ಕೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.