ಅಪರಾಧ ತಡೆಗೆ ಮುಂದಾದ ಗೃಹ ಇಲಾಖೆ: ಸಿಲಿಕಾನ್ ಸಿಟಿಯಲ್ಲಿ ಇನ್ಮುಂದೆ ಹೈ ರೆಸ್ಯೂಲೇಷನ್ ಕ್ಯಾಮೆರಾ ಕಣ್ಣು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಿಲಿಕಾನ್ ಸಿಟಿಯಲ್ಲಿ ಇತ್ತೀಚಿನ ದಿನಗಳಲ್ಲಿ ಅಪರಾಧಗಳು ಹೆಚ್ಚಾಗುತ್ತಿದ್ದು ಈ ಹಿನ್ನೆಲೆ ಕೃತ್ಯ ತಡೆಗೆ ರಾಜ್ಯ ಗೃಹ ಇಲಾಖೆ ದಿಟ್ಟ ಕ್ರಮಕ್ಕೆ ಮುಂದಾಗಿದೆ.

ಇನ್ಮುಂದೆ ಜನಸಂದಣಿ, ಇಂಟರ್ ಸೆಕ್ಷನ್, ಮಹಿಳೆಯರು ಓಡಾಡುವ ಸ್ಥಳಗಳು ಸೇರಿದಂತೆ ಹಲವು ಕಡೆ 7 ಸಾವಿರ ಹೈ ರೆಸಲ್ಯೂಷನ್​ ಕ್ಯಾಮರಾ ಅಳವಡಿಸಲಾಗಿದೆ. 80 ಠಾಣೆಗಳಲ್ಲಿ ಕ್ಯಾಮರಾ ದೃಶ್ಯಾವಳಿ ನೋಡುವುದಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್​ (G Parameshwara) ಹೇಳಿದರು.

ಪೊಲೀಸ್ ಅಧಿಕಾರಿಗಳ ಸಭೆ ಬಳಿಕ ಮಾತನಾಡಿದ ಅವರು, ಬೆಂಗಳೂರಿನ 30 ಕಡೆ ಸೇಫ್ಟಿ ಐಲ್ಯಾಂಡ್​​ ಓಪನ್​ ಮಾಡಲಾಗಿದೆ. ಸೇಫ್ಟಿ ಐಲ್ಯಾಂಡ್​​​ನಲ್ಲಿ ಬಟನ್​​ ಒತ್ತಿದ್ರೆ ಪೊಲೀಸರಿಗೆ ಮಾಹಿತಿ ಬರುತ್ತೆ. ಕೆಲವೇ ನಿಮಿಷಗಳಲ್ಲಿ ಪೊಲೀಸರು ಸ್ಥಳಕ್ಕೆ ಬಂದು ರಕ್ಷಣೆ ಮಾಡುತ್ತಾರೆ ಎಂದು ತಿಳಿಸಿದರು.

ಜನರು ಸಮಸ್ಯೆ ಹೇಳಿಕೊಂಡು ಬಂದಾಗ ಪೊಲೀಸ್ ಇಲಾಖೆ ಜನಸ್ನೇಹಿ ಆಗಬೇಕು. ಪೊಲೀಸ್​​ ಸಿಬ್ಬಂದಿಗೆ ಹಿರಿಯ ಅಧಿಕಾರಿಗಳು ತಿಳಿಹೇಳಬೇಕು. ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದ್ದೇನೆ. ಠಾಣೆಯಲ್ಲಿ ದೂರು ಸ್ವೀಕರಿಸಲ್ಲ ಎಂಬ ದೂರುಗಳು ಬರಬಾರದು. ನಾನು ಕೂಡ ಠಾಣೆಗಳಿಗೆ ಭೇಟಿ ನೀಡುತ್ತೇನೆ ಎಂದು ಹೇಳಿದರು.

ಇದೇ ವೇಳೆ ಹೆಚ್ಚುತ್ತಿರುವ ಟ್ರಾಫಿಕ್ ಕುರಿತು ಮಾತನಾಡಿದ ಸಚಿವರು, ಬೆಂಗಳೂರು ಟ್ರಾಫಿಕ್​ ಕೆಟ್ಟದ್ದು ಎಂಬ ವಿಚಾರ ಇದೆ. ಈ ಅಪಕೀರ್ತಿ ತೆಗೆದುಹಾಕಬೇಕೆಂದು ನಿರ್ಧಾರ ಮಾಡಿದ್ದೇವೆ. ಟ್ರಾಫಿಕ್​ನ ಸಿಬ್ಬಂದಿಗಳಿಂದ ಹಿರಿಯ ಅಧಿಕಾರಿಗಳು ಫೀಲ್ಡ್​​ನಲ್ಲಿರಬೇಕು. ಬೆಳಿಗ್ಗೆ 2 ಗಂಟೆ, ಸಂಜೆ 2 ಗಂಟೆ ಫೀಲ್ಡ್​​ನಲ್ಲಿರಬೇಕು. ದೂರು ಬಂದ ಏರಿಯಾದ ಡಿಸಿಪಿರವರೇ ರೆಸ್ಪಾಂಡ್ ತೆಗೆದುಕೊಳ್ಳಬೇಕು.ಠಾಣೆಯಿಂದಲೂ ಸಹ ಅಡಿಷನಲ್ ಸಿಬ್ಬಂದಿಗಳನ್ನು ಸಪ್ಲಿಮೆಂಟ್ ಮಾಡಲಾಗುವುದು. ಸಿವಿಲ್​ ನಂ 10 ಸಿಬ್ಬಂದಿಗಳನ್ನು ನೀಡಲಾಗುತ್ತೆ. ಇನ್ನು ಮೂರು ತಿಂಗಳಲ್ಲಿ ಟ್ರಾಫಿಕ್ ದೂರು ಇರಬಾರದು. ಬೆಂಗಳೂರು ಟ್ರಾಫಿಕ್ ಸಮಸ್ಯೆಯಿಂದ ಮುಕ್ತಿ ಪಡೆಯಬೇಕು ಮತ್ತು ಆ ಕಳಂಕ ಹೊಗಬೇಕು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!