ಬುಡಕಟ್ಟು ವ್ಯಕ್ತಿ ಮೇಲೆ ಮೂತ್ರ ವಿಸರ್ಜಿಸಿದ್ದ ವ್ಯಕ್ತಿಯ ಮನೆ ಧ್ವಂಸ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬುಡಕಟ್ಟು ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಮೂತ್ರ ವಿಸರ್ಜಿಸಿದ ಪ್ರವೇಶ್ ಶುಕ್ಲಾ ಎನ್ನುವ ವ್ಯಕ್ತಿಯ ಅಕ್ರಮ ಅತಿಕ್ರಮಣವಾಗಿದ್ದ ಮನೆಯನ್ನು ಕೆಡವಲಾಗಿದೆ.

ಸರ್ಕಾರದ ಆದೇಶದ ಮೇರೆಗೆ ಮನೆ ಕೆಡವಲು ಅಧಿಕಾರಿಗಳು ಬುಲ್ಡೋಜರ್‌ಗಳನ್ನು ತರುತ್ತಿದ್ದಂತೆಯೇ ಮನೆಯವರು ಮನೆ ಕೆಡವಬೇಡಿ ಎಂದು ಗೋಗರೆದಿದ್ದಾರೆ. ಕುಟುಂಬ ಸದಸ್ಯರು ಇದು ಹಳೆಯ ವಿಡಿಯೋ, ಇದೀಗ ಇದನ್ನು ಹೊಸತಾಗಿ ವೈರಲ್ ಮಾಡಿ ನಮಗೆ ಸಮಸ್ಯೆ ಮಾಡುತ್ತಿದ್ದಾರೆ ಎಂದಿದ್ದಾರೆ.

ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಕುಬ್ರಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಕುಡಿತದ ನಶೆಯಲ್ಲಿ ಬುಡಕಟ್ಟು ವ್ಯಕ್ತಿ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!