ಹೊಸದಿಗಂತ ಡಿಜಿಟಲ್ ಡೆಸ್ಕ್:
ಪತ್ನಿಯಿಂದ ವಿಚ್ಛೇದನ ಪಡೆಯಲು ವ್ಯಕ್ತಿ ಆಕೆಗೆ ಹೆಚ್‍ಐವಿ (HIV) ಸೋಂಕಿತ ರಕ್ತ ಇಂಜೆಕ್ಷನ್ ಕೊಡಿಸಿದ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.
ಮದುವೆ ಆಗಿ ಕೆಲವರ್ಷಗಳ ಕಾಲ ಚರಣ್ (40) ತನ್ನ ಪತ್ನಿಯೊಂದಿಗೆ ಸಂತೋಷದಿಂದ ಇದ್ದನು. ದಂಪತಿಗೆ ಒಬ್ಬಳು ಮಗಳು ಇದ್ದಾಳೆ.
ಆದರೆ 2018ರಲ್ಲಿ ಚರಣ್ ವರದಕ್ಷಿಣೆಗಾಗಿ ಹಾಗೂ ಗಂಡು ಮಗುವನ್ನು ಹೆರುವಂತೆ ಒತ್ತಾಯಿಸಿ ಕಿರುಕುಳ ನೀಡಲು ಶುರು ಮಾಡಿದನು.
ಇಷ್ಟೇ ಅಲ್ಲದೆ ಆತ ಬೇರೆಯೋದು ಯುವತಿಯ ಜೊತೆ ಅಕ್ರಮ ಸಂಬಂಧವನ್ನು ಹೊಂದಿದ್ದ ಎಂಬ ಆರೋಪ ಕೇಳಿ ಬಂದಿದೆ.
ಹೀಗಾಗಿ ಆತ ಪತ್ನಿ ಬಳಿ ವಿಚ್ಛೇದನ ನೀಡುವಂತೆ ಒತ್ತಾಯಿಸಿದ್ದಾನೆ. ಇದಕ್ಕೆ ಆಕೆ ಒಪ್ಪದ ಹಿನ್ನೆಲೆ ಅ ಹೆಲ್ತ್ ಚೆಕಪ್‍ಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರ ಸಹಾಯದಿಂದ ಹೆಚ್‍ಐವಿ ಸೋಂಕಿತ ರಕ್ತ ಇಂಜೆಕ್ಷನ್ ಕೊಡಿಸಿದ್ದಾನೆ.
ಆಸ್ಪತ್ರೆಗೆ ಹೋದಾಗ ಆಕೆಗೆ ಹೆಚ್‍ಐವಿ ಇರುವುದು ತಿಳಿದುಬಂದಿದೆ. ಚರಣ್‍ನನ್ನು ಪ್ರಶ್ನಿಸಿದಾಗ, ಗರ್ಭಾವಸ್ಥೆಯಲ್ಲಿ ಹೆಚ್‍ಐವಿ ಸಂಪರ್ಕಿಸಿರಬಹುದು ಎಂದುಆತ ತಿಳಿಸಿದ್ದಾನೆ. ಈ ಘಟನೆನಿಂದ ನೊಂದ ಆಕೆ ತಾಡಪಲ್ಲಿ ಪೊಲೀಸರಿಗೆ ಪತಿ ಚರಣ್ ವಿರುದ್ಧ ದೂರು ದಾಖಲಿಸಿದ್ದಾಳೆ. ಆರೋಪಿ ಚರಣ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.