ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಷ್ಟೋ ಹೆಣ್ಣುಮಕ್ಕಳು ಮದುವೆ ನಂತರ ಹೊರಗಿನ ಕೆಲಸ ಬಿಟ್ಟು ಫುಲ್ ಟೈಮ್ ಮನೆಯ ಒಡತಿಯರಾಗಿ ಕಾರ್ಯನಿರ್ವಹಿಸುತ್ತಾಳೆ. ತಾನು ಮನೆಕೆಲಸದವಳಂತೆ ದುಡಿಯುತ್ತಿದ್ದೇನೆ ಎಂದನಿಸರೂ ತನ್ನದೇ ಮನೆ ಎಂದು ಸುಮ್ಮನಾಗುತ್ತಾಳೆ. ವರ್ಷಾನುಗಟ್ಟಲೆ ರಜವಿಲ್ಲದೆ, ಸಂಬಳವಿಲ್ಲದೆ ದುಡಿಯುತ್ತಾಳೆ.
ಆದರೆ ಇಲ್ಲೊಬ್ಬ ಸ್ಪೇನ್‌ನ ಮಹಿಳೆ ಮನೆಗೆಲಸಕ್ಕೆ ಸಂಬಳ ಬೇಕೆಂದು ಪಟ್ಟು ಹಿಡಿದಿದ್ದಾರೆ. ಪತಿಯಿಂದ ಪರಿಹಾರಕ್ಕಾಗಿ ಮಹಿಳೆ ಕೋರ್ಟ್ ಮೆಟ್ಟಿಲೇರಿದ್ದು, 26 ವರ್ಷದ ಮನೆಕೆಲಸಕ್ಕಾಗಿ 76 ಲಕ್ಷ ರೂಪಾಯಿ ನೀಡುವಂತೆ ಪತಿಗೆ ಆದೇಶ ನೀಡಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ಭಾರೀ ವೈರಲ್ ಆಗಿದ್ದು, ಮನೆಕೆಲಸಕ್ಕೂ ಸಂಬಳ ಇರಬೇಕಾ ಎನ್ನುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.