ಹೊಸದಿಗಂತ ಡಿಜಿಟಲ್ ಡೆಸ್ಕ್:
ಸುರಪುರ ತಾಲೂಕಿನ ತಿಂಥಣಿ ಗ್ರಾಮದ ಮೌನೇಶ್ವರ ದೇವಸ್ಥಾನದ ಆವರಣದಲ್ಲಿ ತಡರಾತ್ರಿ ಬಳೆ ವ್ಯಾಪಾರಿಯ ಕತ್ತು ಕೊಯ್ದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಬೆಳಗಾವಿಯ ಅಥಣಿಯ ಬಳೆ ವ್ಯಾಪಾರಿ ಮಲ್ಲಪ್ಪ (38) ಕೊಲೆಯಾದವರು. ಮುನೇಶ್ವರ ಜಾತ್ರೆ ಹಿನ್ನೆಲೆಯಲ್ಲಿ ತಿಂಥಣಿ ಗ್ರಾಮದಲ್ಲಿ ಬಳೆ ಅಂಗಡಿ ಹಾಕಿದ್ದ. ಬಾಗಲಕೋಟೆಯ ಜಮಖಂಡಿಯ ಬುರ್ರಾನ್ ಎಂಬ ವ್ಯಕ್ತಿ ಈತನ ಅಂಗಡಿ ಪಕ್ಕದಲ್ಲೇ ಬಳೆ ಅಂಗಡಿಯನ್ನು ತೆರೆದಿದ್ದಾನೆ. ಈ ವೇಳೆ ಕಾರಣಾಂತರಗಳಿಂದ ಇಬ್ಬರ ನಡುವೆ ವಾಗ್ವಾದ ನಡೆದಿದೆ. ವ್ಯಾಪಾರಿ ಮಲ್ಲಪ್ಪ ಬುರ್ರಾನ್ ಅವರ ಪತ್ನಿಯ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದು, ಈ ಕಾರಣಕ್ಕೆ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಬಳೆ ವ್ಯಾಪಾರಿಯ ಮೃತದೇಹವನ್ನು ತಾಲೂಕು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಕೊಲೆ ಆರೋಪ ಹೊತ್ತಿರುವ ಬುರ್ರಾನ್ನನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.