ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪತ್ನಿಯ ಬಾಯಿಗೆ ಫೆವಿಕ್ವಿಕ್ ಹಾಕಿ ಪತಿರಾಯನೊಬ್ಬ, ಆಕೆಯನ್ನು ಕೊಲೆಗೆ ಯತ್ನಿಸಿದ ಘಟನೆ ಬೆಂಗಳೂರಿನ ನೆಲಮಂಗಲದ ಹಾರೋಕ್ಯಾತನಹಳ್ಳಿಯಲ್ಲಿ ನಡೆದಿದೆ.
ಪತ್ನಿ ಮಂಜುಳಾ ಎಂಬುರ ಮೇಲೆ ಅನೈತಿಕ ಸಂಬಂಧದ ಶಂಕೆಯನ್ನು ಮಾಡಿದ ಪತಿ ಸಿದ್ದಲಿಂಗಸ್ವಾಮಿ ಎಂಬುವರು ಬಾಯಿಗೆ ಫೆವಿಕ್ವಿಕ್ ಹಾಕಿ ಕೊಲೆಗೆ ಯತ್ನಿಸಿದ್ದಾರೆ.
ಕಿರುಚಿಕೊಳ್ಳಬಾರದು ಅಂತ ಪತ್ನಿಯ ಬಾಯಿಗೆ ಫೆವಿಕ್ವಿಕ್ ಹಾಕಿ, ಕುತ್ತಿಗೆ ಹಿಚುಕಿ ಕೊಲೆಗೆ ಯತ್ನಿಸಿದ್ದಾರೆ. ಮನೆಯ ಅಕ್ಕಪಕ್ಕದವರು ವಿಷಯ ತಿಳಿದು ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಂತೆ ಪತಿ ಸಿದ್ದಲಿಂಗಸ್ವಾಮಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಇದೀಗ ಅರೆ ಪ್ರಜ್ಞಾನಾವಸ್ಥೆಯಲ್ಲಿದ್ದಂತ ಮಂಜುಳಾರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಈ ಸಂಬಂಧ ಮಾದನಾಯಕನಹಳ್ಳಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.