ಹೊಸದಿಗಂತ ವರದಿ ಶಿಶಿಲ:
ಇಲ್ಲಿನ ಕೋಟೆ ಬಾಗಿಲು ನಿವಾಸಿ ಸುರೇಶ್ ಎಂಬಾತ ತನ್ನ ಹೆಂಡತಿ ಮಕ್ಕಳಿಗೆ ಮಾರಣಾಂತಿಕ ಹಲ್ಲೆ ಮಾಡಿ ಪತ್ನಿಯ ಕಣ್ಣನ್ನು ಕಚ್ಚಿ ತೆಗೆದ ಭಯಾನಕ ಪ್ರಕರಣ ಡಿ.18 ರಂದು ತಡರಾತ್ರಿ ನಡೆದಿದೆ.
ಸುರೇಶ್ ಎಂಬಾತ ತನ್ನ ಪತ್ನಿಯ ಮುಖದ ಭಾಗಕ್ಕೆ ಕಚ್ಚಿ ಮಾಂಸ ಹೊರ ತೆಗೆದು ಕಣ್ಣಿಗೆ ಕೂಡ ಕೋಲಿನಿಂದ ಹೊಡೆದು ಎಡ ಭಾಗದ ಕಣ್ಣನ್ನು ಸಂಪೂರ್ಣ ಹಾನಿಗೊಳಿಸಿದ್ದಾನೆ. ಅಲ್ಲದೆ, ತನ್ನ ಮಗಳಿಗೆ ತಲೆಯ ಭಾಗಕ್ಕೆ ಹೊಡೆದು ಗಾಯಗೊಳಿಸಿದ್ದಾನೆ.
ಪ್ರಾಣ ಭಯದಿಂದ ಇಬ್ಬರು ತಪ್ಪಿಸಿಕೊಂಡು ನೆರೆ ಹೊರೆಯವರ ಬಳಿ ಬಂದು ಸಹಾಯ ಕೇಳಿದ್ದಾರೆ. ತಕ್ಷಣ ಸ್ಪಂದಿಸಿದ ಸ್ಥಳೀಯರು ಆಂಬ್ಯುಲೆನ್ಸ್ ಸಹಾಯದಿಂದ ಉಜಿರೆಯ ಎಸ್.ಡಿ.ಎಂ. ಆಸ್ಪತ್ರೆಗೆ ತಾಯಿ ಮತ್ತು ಮಗಳನ್ನು ದಾಖಲಿಸಿದ್ದಾರೆ.
ಈ ಘಟನೆಯ ಬಗ್ಗೆ ಮಾಹಿತಿ ಪಡೆದ ಧರ್ಮಸ್ಥಳ ಪೊಲೀಸರು ಆಸ್ಪತ್ರೆಗೆ ತೆರಳಿ ಘಟನೆಯ ಕುರಿತು ಮಾಹಿತಿ ಪಡೆಯುತ್ತಿದ್ದಾರೆ.