ಹೊಸದಿಗಂತ ಡಿಜಿಟಲ್ ಡೆಸ್ಕ್
ಯೂಟ್ಯೂಬರ್ ಓರ್ವ ತಮ್ಮ ಮದುವೆಯ ದಿನದಂದು ತನ್ನ ಪತ್ನಿಗೆ ಕತ್ತೆಯನ್ನು ಉಡುಗೊರೆಯಾಗಿ ನೀಡಿದ ಸನ್ನಿವೇಶ ಪಾಕಿಸ್ತಾನದಲ್ಲಿ ನಡೆದಿದೆ.
ಇಲ್ಲಿನ ಕರಾಚಿಯ ಯೂಟ್ಯೂಬರ್ ಅಜ್ಲಾನ್ ಶಾ ಅವರು ಆರತಕ್ಷತೆಯಲ್ಲಿ ಕತ್ತೆ ಮರಿಯೊಂದನ್ನು ತಂದು, ತನ್ನ ಪತ್ನಿಗೆ ಉಡುಗೊರೆಯಾಗಿ ನೀಡಿದ್ದಾರೆ. ಇದನ್ನು ನೋಡಿದ ಪತ್ನಿ ವಾರಿಷಾ ಮೊದಲು ಆಶ್ಚರ್ಯಗೊಂಡು ಸಂತೋಷಗೊಂಡಿದ್ದಾರೆ.
ವಾರಿಷಾ ಗೆ ಕತ್ತೆ ಮರಿಗಳೆಂದರೆ ಪ್ರೀತಿ ಎಂದು ಗೊತ್ತಿತ್ತು. ಈ ಹಿನ್ನೆಲೆಯಲ್ಲಿ ಆಕೆಗೆ ಮದುವೆಯ ಉಡುಗೊರೆಯಾಗಿ ಕತ್ತೆ ಮರಿಯನ್ನು ತಂದಿದ್ದೇನೆ. ಜೊತೆಗೆ ಕತ್ತೆಯೂ ವಿಶ್ವದ ಅತ್ಯಂತ ಶ್ರಮಶೀಲ ಹಾಗೂ ಪ್ರೀತಿಯ ಪ್ರಾಣಿಯಾಗಿದೆ ಎಂದು ಅಜ್ಲಾನ್ ಶಾ ತಿಳಿಸಿದರು.
ಶಾ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ನೆಟ್ಟಿಗರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಒಬ್ಬಾತ ಒಂದು ಕತ್ತೆಯ ಜೊತೆ ಇನ್ನೊಂದು ಕತ್ತೆ ಫ್ರೀ ಎಂದು ತಿಳಿಸಿದ್ದಾರೆ. ಕತ್ತೆ ಮುಗ್ಧ ಪ್ರಾಣಿ ಎಂದು ಇನ್ನೊಬ್ಬಾತ ಕಾಮೆಂಟ್ ಮಾಡಿದ್ದಾರೆ.