ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಡಿಶಾದ ಭುವನೇಶ್ವರ್‌ನಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನು ಕೊಂದು ರೂಮ್‌ನಲ್ಲಿಯೇ ಎರಡು ದಿನ ಮೃತದೇಹವನ್ನು ಇಟ್ಟುಕೊಂಡಿದ್ದಾನೆ.
ಮೈತ್ರಿ ವಿಹಾರ್‌ನ ತಾರಿಣಿ ನಗರದ ಕೊಳೆಗೇರಿಯಲ್ಲಿ ಘಟನೆ ನಡೆದಿದೆ. ವ್ಯಕ್ತಿ ತನ್ನ ಮೂವರು ಮಕ್ಕಳು ಹಾಗೂ ಪತ್ನಿ ಜೊತೆ ವಾಸವಿದ್ದ. ಪತ್ನಿ ಮಧ್ಯವ್ಯಸನಿಯಾಗಿದ್ದ ಕಾರಣ ಆಗಾಗ ಮನೆಯಲ್ಲಿ ಜಗಳ ನಡೆಯುತ್ತಲೇ ಇತ್ತು.
ಪತ್ನಿ ಕುಡಿದು ಬಂದು ಮನೆಯಲ್ಲಿ ಪತಿಯ ಜೊತೆ ಜಗಳ ಆಡಿದ್ದಾಳೆ. ಇದರಿಂದಾಗಿ ಕೋಪಗೊಂಡ ಪತಿ ಮರದ ಹಲಗೆಯಿಂದ ಆಕೆಯ ತಲೆಗೆ ಹೊಡೆದಿದ್ದಾನೆ. ಇದರಿಂದ ಆಕೆ ಮೃತಪಟ್ಟಿದ್ದಾಳೆ. ಆಕೆಯನ್ನು ಮಂಚದ ಮೇಲೆ ಮಲಗಿಸಿ ಒಂದೆರಡು ದಿನ ಕಳೆದಿದ್ದಾನೆ.
ರೂಮಿನಿಂದ ಕೆಟ್ಟ ವಾಸನೆ ಬಂದಿದ್ದು, ಮಗ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.