ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಜನವರಿ 22ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ರಾಮಲಲಾ ಮೂರ್ತಿಯನ್ನು ಅವಿರೋಧ ಆಯ್ಕೆ ಮಾಡಲಾಗಿದೆ.
ಈ ಕುರಿತು ಮಾತನಾಡಿದ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟಿ ಬಿಮಲೇಂದ್ರ ಮೋಹನ್ ಪ್ರತಾಪ್ ಮಿಶ್ರಾ, ಐದು ವರ್ಷದ ಮಗುವಿನ ರೂಪದ ಈ ವಿಗ್ರಹವನ್ನು ನೋಡಿದಾಗ ನಾವು ಮಂತ್ರಮುಗ್ದರಾಗುತ್ತೇವೆ. ಅದು ನಮ್ಮೊಂದಿಗೆ ಮಾತನಾಡಿದಂತೆ ಭಾಸವಾಗುತ್ತದೆ ಎಂದರು.
ಶುಕ್ರವಾರ ರಾಮಜನ್ಮಭೂಮಿ ಟ್ರಸ್ಟ್ ಸಭೆ ನಡೆಸಿ, ಮತ ಹಾಕುವ ಮೂಲಕ ರಾಮಲಲಾ ಮೂರ್ತಿಯನ್ನು ಆಯ್ಕೆ ಮಾಡಲಾಗಿದೆ. ಮೂರು ಮೂರ್ತಿಗಳಲ್ಲಿ ಈಗ ಒಂದನ್ನು ಆಯ್ಕೆ ಮಾಡಲಾಗಿದ್ದು, ಈ ಆಯ್ಕೆಯಾದ ವಿಗ್ರಹವನ್ನು ಅಯೋಧ್ಯೆ ರಾಮಮಂದಿರದ ಗರ್ಭ ಗುಡಿಯಲ್ಲಿ ‘ಪ್ರಾಣ ಪ್ರತಿಷ್ಠೆ ಮಾಡಲಾಗುವುದು ಎಂದು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟಿ ಬಿಮಲೇಂದ್ರ ಮೋಹನ್ ಪ್ರತಾಪ್ ಮಿಶ್ರಾ ತಿಳಿಸಿದ್ದಾರೆ.
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಕಾರ್ಯದರ್ಶಿ ಚಂಪತ್ ರೈ ಮಾತನಾಡಿ, ರಾಮ ಮೂರ್ತಿ ಆಯ್ಕೆ ಬಗ್ಗೆ ಸಭೆಯನ್ನು ಮಾಡಿ, ಮತ ಹಾಕುವ ಮೂಲಕ ಮೂರ್ತಿಯನ್ನು ಆಯ್ಕೆ ಮಾಡಲಾಗಿದೆ. ನಮ್ಮ ಮುಂದೆ ಹಲವಾರು ಮೂರ್ತಿಗಳನ್ನು ಒಟ್ಟಿಗೆ ಇರಿಸಿದರೂ, ಅದರಲ್ಲಿ ಯಾವುದು ಉತ್ತಮ ಎನ್ನುವುದನ್ನು ನಾವು ಆಯ್ಕೆ ಮಾಡಬೇಕಿತ್ತು. ಇದರಲ್ಲಿ ಒಂದು ಕಾಕತಾಳೀಯವೆಂದರೆ ನಾನು ಒಂದು ವಿಗ್ರಹವನ್ನು ಇಷ್ಟಪಟ್ಟಿದೆ. ಅದೇ ವಿಗ್ರಹಕ್ಕೆ ಎಲ್ಲರೂ ಮತ ಹಾಕಿದ್ದಾರೆ. ಇದು ಒಂದು ನನಗೆ ಸಂತೋಷದ ವಿಷಯ ಎಂದು ಹೇಳಿದ್ದಾರೆ.