ಅಕ್ರಮವಾಗಿ ದಾಸ್ತಾನು ಮಾಡಿದ್ದ ಶ್ರೀಗಂಧದ ತುಂಡುಗಳು ಅರಣ್ಯ ಸಂಚಾರಿ ದಳದ ವಶಕ್ಕೆ

ಹೊಸದಿಗಂತ ವರದಿ ಬನವಾಸಿ:

ಮನೆಯ ಹಿಂಭಾಗದಲ್ಲಿ ಅಕ್ರಮ‌ವಾಗಿ ದಾಸ್ತಾನು‌‌ ಮಾಡಿದ್ದ 64.950 ಕೆಜಿ ತೂಕದ 15 ಶ್ರೀಗಂಧದ ತುಂಡುಗಳನ್ನು ಅರಣ್ಯ ಸಂಚಾರಿ ದಳ ವಶಕ್ಕೆ ಪಡೆದ ಘಟನೆ ಬನವಾಸಿ ಸಮೀಪದ ನರೂರು ಗ್ರಾಮದಲ್ಲಿ ನಡೆದಿದೆ.

ನರೂರು ಗ್ರಾಮದ ಸದಾನಂದ ಬಸಪ್ಪ‌ ಗೌಡ ಅವರ ಮನೆಯ ಹಿಂಭಾಗದಲ್ಲಿ ಕಾನೂನು ಬಾಹಿರವಾಗಿ‌ ಶ್ರೀಗಂಧದ ತುಂಡುಗಳನ್ನು ದಾಸ್ತಾನು ಇಟ್ಟಿರುವ ಖಚಿತ ಮಾಹಿತಿ ಆಧರಿಸಿ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ.. ದಾಳಿಯಲ್ಲಿ ಸುಮಾರು 2ಲಕ್ಷ 25 ಸಾವಿರ ಮೌಲ್ಯದ ಶ್ರೀಗಂಧದ ತುಂಡುಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿತನಾದ ಸದಾನಂದ ಬಸಪ್ಪ ಗೌಡ ತಲೆಮರೆಸಿಕೊಂಡಿದ್ದು ಆರೋಪಿಗಾಗಿ ಹುಡುಕಾಟ ನಡೆದಿದೆ.

ಅರಣ್ಯ ಸಂಚಾರಿದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಬ್ದುಲ್ ಅಜೀಜ್ ಅಹಮದ್ ಶೇಖ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್ ಎಮ್‌ ವಾಲಿ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಅಜಯ್ ನಾಯ್ಕ್, ಉಪ ವಲಯ ಅರಣ್ಯಾಧಿಕಾರಿಗಳಾದ ಇಲಿಯಾಸ್ ಶೇಖ್,ರಾಜು ಪೂಜಾರ,ಚಿದಂಬರ‌ ಗೌಡ ಹಾಗೂ‌‌ ಚಾಲಕ ನಂದೀಶ್ ಗಾಡಿಗೇರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!