ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ವಿರೋಧದ ನಡುವೆಯೂ ಪಾಕಿಸ್ತಾನಕ್ಕೆ IMF 19 ಸಾವಿರ ಕೋಟಿ ಸಾಲವನ್ನು ಮಂಜೂರು ಮಾಡಿದೆ. IMF ಕಾರ್ಯಕಾರಿ ಮಂಡಳಿಯು ತನ್ನ ವಿಸ್ತೃತ ನಿಧಿ ಸೌಲಭ್ಯ ಅಡಿಯಲ್ಲಿ ಪಾಕಿಸ್ತಾನಕ್ಕೆ 19 ಸಾವಿರ ಕೋಟಿ ಸಾಲದ ಕಂತನ್ನು ವಿತರಿಸಲು ಅನುಮೋದನೆ ನೀಡಿದೆ.
ಸಾಲ ಸಿಕ್ಕ ಬೆನ್ನಲ್ಲೇ ಪಾಕಿಸ್ತಾನ ಸರ್ಕಾರ, ಪಾಕಿಸ್ತಾನದ ಆರ್ಥಿಕ ಸ್ಥಿತಿ ಸುಧಾರಿಸಿದೆ ಮತ್ತು ದೇಶವು ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಹಿಂದಿನ IMF ಸಾಲಗಳನ್ನು ಪರಿಣಾಮಕಾರಿಯಾಗಿ ಬಳಸುವಲ್ಲಿ ಪಾಕಿಸ್ತಾನದ ನಿರಂತರ ವೈಫಲ್ಯದ ಬಗ್ಗೆ ಭಾರತ ಎಚ್ಚರಿಕೆ ನೀಡಿತ್ತು. ಹಣವನ್ನು ಪಾಕ್ ಗಡಿಯಾಚೆಗಿನ ಭಯೋತ್ಪಾದನೆಗೆ ಬಳಸಿಕೊಳ್ಳಲಿದೆ. ಹೀಗಾಗಿ ಪಾಕ್ಗೆ ಹಣ ನೀಡಬಾರದು ಎಂದಿತ್ತು. ಅಲ್ಲದೇ IMF ಮಹತ್ವದ ಸಭೆಯಲ್ಲಿ ಭಾರತ ಮತದಾನದಿಂದ ದೂರ ಉಳಿದಿತ್ತು.
ಆದರೆ ಮತದಾನದ ಫಲಿತಾಂಶಗಳು ಪಾಕಿಸ್ತಾನದ ಪರ ಇದ್ದ ಕಾರಣ ಅಂತರರಾಷ್ಟ್ರೀಯ ಹಣಕಾಸು ನಿಧಿ ಪಾಕಿಸ್ತಾನಕ್ಕೆ ಸಾಲವನ್ನು ನೀಡಿದೆ ಎನ್ನಲಾಗಿದೆ.