ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ಪರಿಣಾಮ ಇದೀಗ ಬಟ್ಟೆ ಮಾರುಕಟ್ಟೆಯ ಮೇಲೂ ಗೋಚರಿಸುತ್ತಿದೆ. ಇರಾನ್–ಇಸ್ರೇಲ್ ನಡುವಿನ ಉದ್ವಿಗ್ನತೆ ಹೆಚ್ಚಾದ ಹಿನ್ನೆಲೆ, ರೆಡಿಮೇಡ್ ಉಡುಪುಗಳ ದರ ಏರಿಕೆಯಾಗುವ ಭೀತಿ ವ್ಯಕ್ತವಾಗಿದೆ.
ನಗರದ ಪ್ರಮುಖ ವಾಣಿಜ್ಯ ಕೇಂದ್ರವಾದ ಚಿಕ್ಕಪೇಟೆ ಜವಳಿ ಮಾರುಕಟ್ಟೆಯಲ್ಲಿ ಈಗಾಗಲೇ ಪರಿಣಾಮ ಕಾಣಿಸುತ್ತಿದೆ. ಹಬ್ಬಗಳ ಕಾಲ ಸಮೀಪಿಸುತ್ತಿರುವ ಸಂದರ್ಭದಲ್ಲಿ ಬೆಲೆ ಏರಿಕೆಯ ಆತಂಕ ವ್ಯಾಪಾರಸ್ಥರು ಹಾಗೂ ಗ್ರಾಹಕರಲ್ಲಿ ಚಿಂತೆ ಮೂಡಿಸಿದೆ.
ಇದನ್ನೂ ಓದಿ:
ಭಾರತದಿಂದ ಕುವೈತ್, ಕತಾರ್ ಸೇರಿದಂತೆ ಅನೇಕ ದೇಶಗಳಿಗೆ ನಡೆಯುತ್ತಿದ್ದ ಜವಳಿ ರಫ್ತು ಯುದ್ಧದ ಪರಿಣಾಮ ಸ್ಥಗಿತಗೊಂಡಿದೆ. ಇದರಿಂದ ಮಾರುಕಟ್ಟೆಯಲ್ಲಿ ವ್ಯವಹಾರ ಕುಂಠಿತವಾಗಿದ್ದು, ಉದ್ಯಮಕ್ಕೆ ಹೊಡೆತ ಬಿದ್ದಿದೆ.
ಇನ್ನೊಂದೆಡೆ, ಕಚ್ಚಾ ವಸ್ತುಗಳ ಆಮದು ಮತ್ತು ಸಾಗಾಣಿಕೆಯಲ್ಲಿ ತೊಂದರೆ ಉಂಟಾಗಿರುವುದರಿಂದ ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ಗುಜರಾತ್‌ನ ಸೂರತ್ ಭಾಗದಲ್ಲೂ ಬಟ್ಟೆಗಳ ದಾಸ್ತಾನು ಕಡಿಮೆಯಾಗುತ್ತಿರುವುದು ಗಮನಾರ್ಹ.
ಈ ಎಲ್ಲಾ ಕಾರಣಗಳಿಂದ ಏಪ್ರಿಲ್ ತಿಂಗಳಿನಿಂದ ರೆಡಿಮೇಡ್ ಬಟ್ಟೆಗಳ ದರದಲ್ಲಿ ಶೇ.10 ರಿಂದ 15ರಷ್ಟು ಏರಿಕೆ ಸಂಭವಿಸುವ ಸಾಧ್ಯತೆ ಇದೆ ಎಂದು ವ್ಯಾಪಾರ ವಲಯ ಅಂದಾಜಿಸಿದೆ.



