Saturday, November 15, 2025

‘ಮೋದಿ ಅಲೆ’ಯ ಪ್ರಭಾವ ಯಾವತ್ತೂ ಕಡಿಮೆಯಾಗಿಲ್ಲ: ಬಸವರಾಜ ಬೊಮ್ಮಾಯಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶವು ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ಇನ್ನೂ ಅತೀವ ಬಲವಾಗಿ ಮುಂದುವರಿದಿರುವುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಲೋಕಸಭಾ ಚುನಾವಣೆಯ ಬಳಿಕವೂ ಮೋದಿ ಅಲೆಯ ಪ್ರಭಾವ ಕಡಿಮೆಯಾಗಿಲ್ಲವಷ್ಟೇ ಅಲ್ಲ, ಮಹಾರಾಷ್ಟ್ರ, ಹರಿಯಾಣ ಹಾಗೂ ಬಿಹಾರದಲ್ಲಿ ಜನರು ಮತ್ತೆ ಅವರ ನಾಯಕತ್ವಕ್ಕೆ ಬೆಂಬಲ ಸೂಚಿಸಿರುವುದು ಮಹತ್ವದ್ದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, ಬಿಹಾರದಲ್ಲಿ ಜಾತಿ ರಾಜಕಾರಣ ಮತ್ತು ಸಮೀಕರಣಗಳ ಬಗ್ಗೆ ನಡೆದಿದ್ದ ಚರ್ಚೆಗಳು ಕಾಂಗ್ರೆಸ್ ಪಕ್ಷಕ್ಕೆ ಪ್ರತಿಕೂಲವಾಗುವುದಾಗಿ ಫಲಿತಾಂಶ ತೋರಿಸಿದೆ ಎಂದರು. ತಮ್ಮೊಂದಿಗೆ ಎಲ್ಲಾ ಸಮುದಾಯಗಳ ಬೆಂಬಲವಿದೆ ಎಂದು ಕಾಂಗ್ರೆಸ್ ನಾಯಕರಿಗೆ ಇದ್ದ ಭ್ರಮೆಯೂ ಸುಳ್ಳಾಗಿದೆ ಎಂದು ಟೀಕಿಸಿದರು. ಎಸ್‌ಸಿ-ಎಸ್‌ಟಿ ಸಮುದಾಯದ ಶೇ.80ರಷ್ಟು ಜನರು ಬಿಜೆಪಿ ಪರ ಮತ ಹಾಕಿರುವುದರಿಂದ ಹಿಂದುಳಿದ ವರ್ಗಗಳ ಬೆಂಬಲವೂ ಬಿಜೆಪಿ ಕಡೆಗೆ ಒಲಿದಿದೆ ಎಂದು ಸಮರ್ಥಿಸಿದರು.

error: Content is protected !!