ಮೋದಿ ಮೈದಾನದಲ್ಲಿ ನಡೆಯಲಿದೆ ಐಪಿಎಲ್ ಫೈನಲ್ ಹಣಾಹಣಿ: ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

16 ನೇ ಆವೃತ್ತಿಯ ಐಪಿಎಲ್ (IPL 2023)ಉತ್ತಮವಾಗಿ ನಡೆಯುತ್ತಿದ್ದು, ಇದುವರೆಗೆ 28 ಪಂದ್ಯಗಳು ನಡೆದಿದ್ದು, 29 ನೇ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ (Chennai Super Kings vs Sunrisers Hyderabad) ನಡುವೆ ನಡೆಯುತ್ತಿದೆ.

ಈ ನಡುವೆ ಆದರೆ ಬಿಸಿಸಿಐ ಪ್ಲೇ ಆಫ್ (Playoffs) ಹಾಗೂ ಫೈನಲ್ ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಈ ಬಾರಿಯ ಐಪಿಎಲ್ ಫೈನಲ್ ಮೇ 28ರಂದು ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ( Narendra Modi Stadium in Ahmedabad) ನಡೆಯಲಿದೆ ಎಂಬುದು ಮೊದಲೇ ತಿಳಿದಿತ್ತು. ಆದರೆ ಅದು ಅಧಿಕೃತವಾಗಿ ಘೋಷಣೆಯಾಗಿರಲಿಲ್ಲ. ಇದೀಗ ಬಿಸಿಸಿಐ ಈ ಊಹಾಪೋಹಕ್ಕೆ ತೆರೆ ಎಳೆದಿದ್ದು, ನಿರೀಕ್ಷೆಯಂತೆ ಈ ಬಾರಿಯ ಐಪಿಎಲ್ ಫೈನಲ್ ಪಂದ್ಯವನ್ನು ವಿಶ್ವದ ಅತೀ ದೊಡ್ಡ ಕ್ರಿಕೆಟ್ ಕ್ರೀಡಾಂಗಣವಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಸಲು ತೀರ್ಮಾನಿಸಿದೆ.

ಮೊದಲ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದೆ. ಎರಡನೇ ಕ್ವಾಲಿಫೈಯರ್ ಮತ್ತು ಫೈನಲ್ ಪಂದ್ಯ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಇದರೊಂದಿಗೆ ಸತತ ಎರಡನೇ ಬಾರಿಗೆ ಐಪಿಎಲ್ ಫೈನಲ್ ಪಂದ್ಯದ ಆತಿಥ್ಯ ವಹಿಸುವ ಜವಾಬ್ದಾರಿ ಅಹಮದಾಬಾದ್​ಗೆ ಲಭಿಸಿದೆ.

ಪ್ರಸಕ್ತ ಐಪಿಎಲ್ ಗ್ರೂಪ್ ಹಂತದಲ್ಲಿ 10 ಫ್ರಾಂಚೈಸಿಗಳು ಒಟ್ಟು 70 ಪಂದ್ಯಗಳನ್ನು ಆಡುತ್ತಿವೆ. ಮೇ 21 ರಂದು ಗುಂಪು ಹಂತದ ಕೊನೆಯ ಪಂದ್ಯ ನಡೆಯಲಿದೆ. ಒಂದು ದಿನದ ಬಳಿಕ ಅಂದರೆ,ಮೇ 23 ರಿಂದ ಪ್ಲೇ ಆಫ್ ಪಂದ್ಯಗಳು ಆರಂಭವಾಗಲಿವೆ. ನಂತರ ಮೇ 28 ಭಾರತದ ಮಿಲಿಯನೇರ್ ಲೀಗ್‌ನ ಫೈನಲ್ ನಡೆಯಲಿದೆ.

ಐಪಿಎಲ್ 2023ರ ಪ್ಲೇಆಫ್‌ ಮತ್ತು ಫೈನಲ್‌ ಪಂದ್ಯದ ವೇಳಾಪಟ್ಟಿ

1) ಮೇ 23 – ಕ್ವಾಲಿಫೈಯರ್ 1 ಪಂದ್ಯ – ಚೆನ್ನೈ

2) ಮೇ 24 – ಎಲಿಮಿನೇಟರ್ ಪಂದ್ಯ – ಚೆನ್ನೈ

3) ಮೇ 26 – ಕ್ವಾಲಿಫೈಯರ್ 2 ಪಂದ್ಯ – ಅಹಮದಾಬಾದ್

4) ಮೇ 28 – ಫೈನಲ್ -ಕ್ವಾಲಿಫೈಯರ್ 1 ರ ವಿಜೇತರು vs ಕ್ವಾಲಿಫೈಯರ್ 2 ರ ವಿಜೇತರ ನಡುವೆ- ಅಹಮದಾಬಾದ್

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!