ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ ಇನ್ನು ಕೆಲವೇ ಕೆಲವು ದಿನಗಳಲ್ಲಿ ಆರಂಭವಾಗಲಿದೆ. ಫ್ರಾಂಚೈಸಿಗಳು ಎಲ್ಲಾ ತಯಾರಿ ನಡೆಸಿದ್ದು ತಂಡದ ಆಟಗಾರರನ್ನ ಬರಮಾಡಿಕೊಳ್ಳುತ್ತಿವೆ. ಡೆಲ್ಲಿ ಕ್ಯಾಪಿಟಲ್ ಕೂಡ ತಂಡದ ಕ್ಯಾಪ್ಟನ್ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಿದೆ.
ಟೀಮ್ ಇಂಡಿಯಾದ ಯುವ ಆಲ್ರೌಂಡರ್ ಅಕ್ಷರ್ ಪಟೇಲ್ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕ್ಯಾಪ್ಟನ್ ಆಗಿದ್ದಾರೆ. ಈ ಕುರಿತು ಡೆಲ್ಲಿ ಫ್ರಾಂಚೈಸಿಯು ಅಧಿಕೃತವಾಗಿ ಘೋಷಣೆ ಮಾಡಿದೆ.
ಆರ್ಸಿಬಿಯ ಮಾಜಿ ಪ್ಲೇಯರ್ ಹಾಗೂ ಮಾಜಿ ನಾಯಕ ಫಾಪ್ ಡುಪ್ಲೆಸ್ಸಿ ಅವರು ಡೆಲ್ಲಿ ಕ್ಯಾಪ್ಟನ್ ಆಗುತ್ತಾರೆ ಎನ್ನಲಾಗಿತ್ತು. ಇದಾದ ಮೇಲೆ ಕೆಎಲ್ ರಾಹುಲ್ ಅವರು ನಾಯಕನಾಗುತ್ತಾರೆ ಎಂದು ಹೇಳಲಾಗಿತ್ತು. ಆದರೆ ಇದೀಗ ಡೆಲ್ಲಿ ಫ್ರಾಂಚೈಸಿಯೂ ಅಕ್ಷರ್ ಪಟೇಲ್ ಅವರನ್ನು ನಾಯಕನಾಗಿ ಅನೌನ್ಸ್ ಮಾಡಿದೆ.
ಅಕ್ಷರ್ ಪಟೇಲ್ ಅವರು ಮೊದಲಿನಿಂದಲೂ ಡೆಲ್ಲಿ ತಂಡದಲ್ಲೇ ಇರುವಂತ ಆಟಗಾರ. 2019ರಲ್ಲಿ ಡೆಲ್ಲಿ ಸೇರಿಕೊಂಡಿದ್ದ ಅಕ್ಷರ್ ಇದುವರೆಗೆ 82 ಪಂದ್ಯಗಳನ್ನು ಆಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ ಫ್ರಾಂಚೈಸಿ 2025ರ ಐಪಿಎಲ್ಗಾಗಿ 16.5 ಕೋಟಿ ರೂಪಾಯಿಗಳನ್ನು ನೀಡಿ ಆಲ್ರೌಂಡರ್ ಅಕ್ಷರ್ ಪಟೇಲ್ ಅವರನ್ನು ರಿಟೈನ ಮಾಡಿಕೊಂಡಿತ್ತು. ಒಟ್ಟು 274 ಟಿ20 ಪಂದ್ಯಗಳನ್ನು ಆಡಿರುವ ಅನುಭವ ಅಕ್ಷರ್ಗಿದೆ. ಜೊತೆಗೆ 3,088 ರನ್ಗಳ ಸರದಾನಾಗಿದ್ದಾರೆ. ಐಪಿಎಲ್‌ನಲ್ಲಿ ಇದುವರೆಗೆ 239 ವಿಕೆಟ್‌ಗಳನ್ನು ಕಬಳಿಸಿದ್ದಾರೆ.