ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದಲ್ಲಿ ಇಸ್ರೇಲ್ ರಾಯಭಾರಿ ರುವೆನ್ ಅಜರ್ ಪತ್ನಿಯೊಂದಿಗೆ ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಿದ್ದು, ದೇವಾಲಯವನ್ನು ಕಂಡು ವ್ಹಾವ್ ಎಂದು ಉದ್ಘರಿಸಿದ್ದಾರೆ.
ಇಲ್ಲಿನ ಯಾತ್ರಾರ್ಥಿಗಳು ಹಾಗೂ ಭಕ್ತರ ಭಕ್ತಿಗೆ ಮನಸೋತಿದ್ದೇನೆ. ಅಯೋಧ್ಯೆಯ ಭಗವಾನ್ ರಾಮನ ಭವ್ಯ ಮಂದಿರಕ್ಕೆ ಭೇಟಿ ನೀಡಲು ನನಗೆ ಹೆಮ್ಮೆ ಎನಿಸುತ್ತದೆ, ಯಾತ್ರಿಕರು ಮತ್ತು ಭಕ್ತರ ಸಂಖ್ಯೆಯನ್ನು ನೋಡಿ ನಾನು ಆಶ್ಚರ್ಯಗೊಂಡಿದ್ದೇನೆ ಎಂದು ರುವೆನ್ ಅಜರ್ ಹೇಳಿದ್ದಾರೆ.
ಇದಕ್ಕೂ ಮುನ್ನ, ಭಾರತದಲ್ಲಿನ ಇಸ್ರೇಲ್ ರಾಯಭಾರಿ ರುವೆನ್ ಅಜರ್ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಲಕ್ನೋದಲ್ಲಿನ ಅವರ ನಿವಾಸದಲ್ಲಿ ಭೇಟಿಯಾಗಿದ್ದರು.