ಸಕಲೇಶಪುರ ಜನರ ನಿದ್ದೆಗೆಡಿಸಿದ ಕಾಳಿಂಗ ಸರ್ಪ ಕೊನೆಗೂ ಸೆರೆ

ಹೊಸದಿಗಂತ ವರದಿ,ಹಾಸನ:

ಸಕಲೇಶಪುರ ತಾಲೂಕಿನ ವಳಲಹಳ್ಳಿ ಗ್ರಾ.ಪಂ ವ್ಯಾಪ್ತಿಯ ಬೊಬ್ಬನಹಳ್ಳಿ ಗ್ರಾಮದ ಗ್ರಾಮಸ್ಥರಿಗೆ ಕಾಡು ಪ್ರಾಣಿಗಳಿಂದಗಿ ನೆಮ್ಮದಿ ಜೀವನ ಸಾಗಿಸುವ ಪರಿಸ್ಥಿತಿ ಸದ್ಯಕ್ಕೆ ಸಾಧ್ಯವಿಲ್ಲ ಎಂಬುವುದು ಮತೊಮ್ಮೆ ಸಾಭಿತಾಗಿದೆ.

ಪ್ರತಿದಿನ ಕಾಡು ಆನೆಗಳಿಂದ ತಮ್ಮ ಬೆಳೆ ಹಾಗೂ ಪ್ರಾಣ ರಕ್ಷಣೆಗೆ ಗ್ರಾಮಸ್ಥರು ಹರ ಸಾಹಸ ಪಡುತ್ತಿದ್ದಾರೆ. ಕಳೆದ ಐದು ದಿನಗಳ ಹಿಂದೆ ದಿಡೀರನೆ ಪ್ರತ್ಯಕ್ಷವಾದ ಕಾಳಿಂಗ ಸರ್ಪ ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿತ್ತು .‌ ಇಂದು ಬೆಳಗ್ಗೆ ಮತ್ತೆ ಗ್ರಾಮಪಂಚಾಯಿತಿಯ ಜಾತಹಳ್ಳಿ ದೇವರಾಜು ಅವರ ಭತ್ತದ ಕಣದಲ್ಲಿ ಕಾಳಿಂಗ ಸರ್ಪವು ಕಾಣಿಸಿಕೊಂಡಿತ್ತು . ಕೂಡಲೇ ಗ್ರಾಮಸ್ಥರು ಅದನ್ನು ಹಿಡಿಯಲು ಸಕಲೇಶಪುರ ಉರಗತಜ್ಞರದ ಮಹಮ್ಮದ್ ಫರಾನ್ ಅವರನ್ನು ಸಂಪರ್ಕಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಉರಗತಜ್ಞ ಕಾಳಿಂಗ ಸರ್ಪವನ್ನು ಹಿಡಿಯಲು ಯಶಸ್ವಿಯಾದರು . ಕಾಳಿಂಗ ಸರ್ಪವು ಸುಮಾರು 14 ಅಡಿ ಉದ್ದದ, 10 ಕೆಜಿ ತೂಕವಿದ್ದು, ಅರಣ್ಯ ಇಲಾಖೆಯವರ ಸಮುಖದಲ್ಲಿ ಬಿಸ್ಲೆ ರಕ್ಷಿತಾರಣ್ಯಕ್ಕೆ ಸುರಕ್ಷಿತವಾಗಿ ಬಿಡಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!