ಬಾಕ್ಸಾಫೀಸ್‌ನಲ್ಲಿ ದಿ ಕಾಶ್ಮೀರಿ ಫೈಲ್ಸ್‌ ಅಬ್ಬರ, ಚಿತ್ರದ ಗಳಿಕೆ ಎಷ್ಟು ಗೊತ್ತಾ..?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೆಲ ಸಿನಿಮಾಗಳು ಹೆಚ್ಚಿನ ಜನಪ್ರಿಯತೆಯಿಂದಲೇ ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿರುತ್ತವೆ. ಸಿನಿಮಾಗೆ ಹೆಚ್ಚಿನ ಬಂಡವಾಳ ಹೂಡದಿದ್ದರೂ ಸಹ ಕಂಟೆಂಟ್‌ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತವೆ. ಈ ಸಾಲಿಗೆ ದಿ ಕಾಶ್ಮೀರ ಫೈಲ್ಸ್‌ ಸಿನಿಮಾ ಸೇರಿದೆ. ಇದರಲ್ಲಿ ಅದ್ಧೂರಿ ತಾರಾಬಳಗವಿಲ್ಲ, ಬಿಗ್ ಬಜೆಟ್ ಸಿನಿಮಾ ಅಲ್ಲ, ಆದರೆ ಜನರ ಮನಸಲ್ಲಿ ಈ ಸಿನಿಮಾ ಅಚ್ಚಳಿಯದಂತೆ ಉಳಿದಿದೆ.

ಕಥೆಯಲ್ಲಿರುವ ಸಾರಾಂಶ ಪ್ರೇಕ್ಷಕರು ಈ ಸಿನಿಮಾವನ್ನು ಮತ್ತೆ ಮತ್ತೆ ನೋಡುವಂತೆ ಮಾಡಿದೆ. ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಈ ಚಿತ್ರವು ಕಾಶ್ಮೀರದ ನೈಜ ಘಟನೆಗಳನ್ನು ಆಧರಿಸಿದೆ. ಪ್ರತಿಯೊಬ್ಬ ಭಾರತೀಯನೂ ಈ ಚಿತ್ರದಲ್ಲಿನ ಭಾವನಾತ್ಮಕ ದೃಶ್ಯಗಳಿಗೆ ತೀರಾ ಹತ್ತಿರದ ಸಂಬಂಧ ಹೊಂದಿರುವುದರಿಂದ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ಕಂಡಿದೆ.

ಯಾವುದೇ ನಿರೀಕ್ಷೆಗಳಿಲ್ಲದೆ ಬಿಡುಗಡೆಯಾದ ಈ ಚಿತ್ರಕ್ಕೆ ದಿನದಿಂದ ದಿನಕ್ಕೆ ಪ್ರೇಕ್ಷಕರು ಹೆಚ್ಚುತ್ತಲೇ ಯಶಸ್ಸು ಕಂಡಿದೆ. ಈ ಚಿತ್ರ ಇದೀಗ 250 ಕೋಟಿಗೂ ಅಧಿಕ ಗಳಿಕೆ ಮಾಡಿ ಎಲ್ಲರ ಗಮನ ಸೆಳೆದಿದೆ. ಚಿತ್ರದಲ್ಲಿ ಮಿಥುನ್ ಚಕ್ರವರ್ತಿ, ಅನುಪಮ್ ಖೇರ್, ದರ್ಶನ್ ಕುಮಾರ್, ಪಲ್ಲವಿ ಜೋಶಿ, ಚಿನ್ಮಯ್ ಮಾಂಡ್ಲೇಕರ್ ಮತ್ತು ಪ್ರಕಾಶ್ ಬೆಳವಾಡಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here