ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ 10 ಲಕ್ಷ ಕಾಗೆಗಳನ್ನು ಕೊಲ್ಲಲು ಮುಂದಾದ ಕೀನ್ಯಾ ಸರ್ಕಾರ, ಯಾಕೀ ನಿರ್ಧಾರ ಮಾಡಿದೆ? ಇಲ್ಲಿದೆ ಡೀಟೇಲ್ಸ್..
ಕೀನ್ಯಾದಲ್ಲಿ ಕಾಗೆಗಳ ಕಾಟ ಜೋರಾಗಿದ್ದು, ಅಲ್ಲಿನ ಕರಾವಳಿ ಪಟ್ಟಣವಾದ ಮೊಂಬಾಸಾದಲ್ಲಿ ಕಸ ಹೆಚ್ಚಾಗಿದ್ದು, ಕಾಗೆಗಳ ನೆಚ್ಚಿನ ತಾಣವಾಗಿ ಅದು ಬದಲಾಗಿದೆ. ಹೀಗಾಗಿ ಭಾರತೀಯ ಮೂಲದ ಕೊರ್ವಸ್ ಸ್ಪ್ಲೆಂಡೆನ್ಸ್ ಎಂಬ ಕಾಗೆಯನ್ನು ಹತ್ತಿಕ್ಕಲು ಅಲ್ಲಿನ ವನ್ಯಜೀವಿ ಸಂಘ ಮುಂದಾಗಿದೆ.
ಕೀನ್ಯಾ ಪ್ರವಾಸೋದ್ಯಮ ಪ್ರದೇಶವಾಗಿದೆ. 3ನೇ ಅತಿದೊಡ್ಡ ವಿದೇಶಿ ವಿನಿಮಯ ಗಳಿಕೆಯನ್ನು ಹೊಂದಿದೆ. ಹೀಗಾಗಿ ಇಲ್ಲಿ ಅನೇಕ ಹೋಟೆಲ್ಗಳು ರೆಸ್ಟೋರೆಂಟ್ಗಳನ್ನು ಕಾಣಬಹುದಾಗಿದೆ. ಆದರೆ ಕಾಗೆಗಳ ಸಂಖ್ಯೆಯಿಂದ ಅಲ್ಲಿನ ಪ್ರವಾಸೋದ್ಯಮಕ್ಕೆ ತೊಂದರೆಯಾಗುತ್ತಿದೆ. ಹೋಟೆಲ್ ಬಳಿ ಬಂದು ಆಹಾರ ತಿನ್ನುವುದು, ಟೇಬಲ್ ಮೇಲೆ ಹಿಕ್ಕೆ ಹಾಕೋದರಿಂದ ತೊಂದರೆ ಉಂಟು ಮಾಡುತ್ತಿದೆ. ಇದರಿಂದ ಪ್ರವಾಸಿರು ಮತ್ತು ಗ್ರಾಹಕರು ನೆಗೆಟಿವ್ ವಿಮರ್ಶೆ ಮಾಡುತ್ತಿದ್ದಾರೆ ಎಂದು ಹೋಟೆಲ್ ಮಾಲೀಕರು ದೂರಿದ್ದಾರೆ.
ಕಾಗೆಗಳನ್ನು ಕೊಲ್ಲಲು ಕೀನ್ಯಾ ಮುಂದಾಗಿದೆ. ಡಿಸೆಂಬರ್ 31ರೊಳಗೆ ಕಾಗೆಗಳನ್ನು ಮುಗಿಸಲಿದೆ. ಇದಕ್ಕಾಗಿಯೇ ಕೀನ್ಯಾ ಸರ್ಕಾರ ಸ್ಟಾರ್ಲೈಸೈಡ್ ಎಂಬ ವಿಷವನ್ನು ನ್ಯೂಜಿಲೆಂಡ್ನಿಂದ ಆಮದು ಮಾಡಿಕೊಳ್ಳಲು ಮುಂದಾಗಿದೆ. ಅಂದಹಾಗೆಯೇ ಒಂದು ಕಿಲೋ ವಿಷದ ಬೆಲೆ ಸುಮಾರು 5 ಲಕ್ಷ ರೂಪಾಯಿಯಾಗಿದೆ. ಹೀಗಾಗಿ ಕಾಗೆಗಳ ಕಾರ್ಯಾಚರಣೆಗೆ 5 ಕೆಜಿ ಬಳಸಲು ಮುಂದಾಗಿದೆ.
ಸ್ಟಾರ್ಲೈಸೈಡ್ ಅತ್ಯಂತ ವಿಷಕಾರಿ ಕೆಮಿಕಲ್. ಪಕ್ಷಿಗಳನ್ನು ಕೊಲ್ಲಲು ಇದು ಸುಮಾರು 10ರಿಂದ 12 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಕಾಗೆಗಳಿಗೆ ಅವುಗಳು ಸೇವಿಸುವ ಮಾಂಸದೊಳಗೆ ಇರಿಸಿ ಕೊಲ್ಲಲು ಇದೀಗ ದೇಶವೊಂದು ಮುಂದಾಗಿದೆ ಅನ್ನೋದೇ ವಿಪರ್ಯಾಸ.