ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ಇಡುಕ್ಕಿಯ ಕ್ರಿಶ್ಚಿಯನ್ ಧರ್ಮಪ್ರಾಂತ್ಯವೊಂದು ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಬಾಲಿವುಡ್‌ನ ’ದಿ ಕೇರಳ ಸ್ಟೋರಿ’ ಸಿನೆಮಾ ಪ್ರದರ್ಶಿಸುವ ಮೂಲಕ ಸುದ್ದಿಯಾಗಿದೆ.
ಈ ಬಗ್ಗೆ ವಿವರಣೆ ನೀಡಿರುವ ಧರ್ಮಪ್ರಾಂತ್ಯ, ’ಪ್ರೀತಿಯ ಬಗ್ಗೆ ಹಾಗೂ ಪ್ರೀತಿಯಿಂದ ಆಗುವ ಪರಿಣಾಮ, ಎದುರಾಗುವ ಅಪಾಯಗಳ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸಲು ಈ ಚಿತ್ರವನ್ನು ಪ್ರದರ್ಶಿಲಾಗಿದೆ ಎಂದು ಹೇಳಿದೆ.
ಪ್ರತಿ ವರ್ಷ ನಾವು ರಜಾ ಅವಧಿಯಲ್ಲಿ ಮಕ್ಕಳಿಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ. ಇವುಗಳಲ್ಲಿ ನಿರ್ದಿಷ್ಟ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಅವುಗಳ ಬಗ್ಗೆ ಪುಸ್ತಕವನ್ನು ಸಿದ್ಧಪಡಿಸುತ್ತೇವೆ. ಇದರ ಭಾಗವಾಗಿ ಚಲನಚಿತ್ರವೂ ಪ್ರದರ್ಶನಗೊಂಡಿದೆ ಎಂದು ಧರ್ಮಪ್ರಾಂತ್ಯದ ಮಾಧ್ಯಮ ವಕ್ತಾರರು ತಿಳಿಸಿದ್ದಾರೆ ಎಂದು ಕೇರಳದ ಮಾಧ್ಯಮಗಳು ವರದಿ ಮಾಡಿವೆ.