ಹೊಸದಿಗಂತ ವರದಿ ತುಮಕೂರು:
ತಿಪಟೂರು ತಾಲೂಕು ಕಸಬಾ ಹೋಬಳಿ ಕರಿಕೆರೆ ಮಜುರೆ ಗ್ರಾಮದ ಅಂಚೆಕೊಪ್ಪಲು ಗ್ರಾಮದಲ್ಲಿ ರಾತ್ರಿ ಸಮಯದಲ್ಲಿ ಗ್ರಾಮಸ್ಥರ ಕಾರ್ಯಾಚರಣೆ ವೇಳೆ ಚಿರತೆಯು ಬೋನಿಗೆ ಬಿದ್ದಿದೆ.
ಸುಮಾರು ಒಂದು ತಿಂಗಳ ಕಾಲ ಸತತ ಪ್ರಯತ್ನ ಪಟ್ಟು ಗ್ರಾಮಸ್ಥರ ಮನವಿ ಮೇರೆಗೆ ಅರಣ್ಯ ಇಲಾಖೆಯು ಅಂಚೆಕೊಪ್ಪಲು ಗ್ರಾಮದ ತೋಟದ ಸಾಲಿನಲ್ಲಿ ಚಿರತೆ ಬೋನನ್ನು ಇಡಲಾಗಿತ್ತು, ಆದರೆ ಸುಮಾರು ನಾಲ್ಕೈದು ದಿನ ಆದರೂ ಬಿಡದ ಕಾರಣ ಗ್ರಾಮಸ್ಥರು ಬೋನನ್ನು ಊರಿನ ಗ್ರಾಮದೊಳಗೆ ತಂದು ಇಟ್ಟಿದ್ದು ಎರಡು ಮೂರು ದಿನಗಳಿಂದ ಕಾರ್ಯಾಚರಣೆ ನಡೆಸಿ ರಾತ್ರಿ ಸಮಯದಲ್ಲಿ ಚಿರತೆ ಸೆರೆ ಹಿಡಿಯಲು ಕಾದು ಕುಳಿತಿದ್ದು ಹಾಗೂ ಚಿರತೆಯ ಚಲನವಲನವನ್ನು ಗಮನಿಸಿ ಚಿರತೆ ಸೆರೆ ಹಿಡಿಯಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದರು. ಬೋನ್‍ಗೆ ಬಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ವಶ ಪಡಿಸಿಕೊಂದ್ದಾರೆ.
ಚಿರತೆ ಬಿದ್ದ ಬೋನಿಗೆ ಸುತ್ತಮುತ್ತಲಿನ ಏಳೆಂಟು ಗ್ರಾಮದ ಗ್ರಾಮಸ್ಥರು ಚಿರತೆಯನ್ನು ನೋಡಲು ಪುಟಾಣಿ ಮಕ್ಕಳೊಂದಿಗೆ ಗ್ರಾಮಕ್ಕೆ ನೂರಾರು ಜನ ಆಗಮಿಸಿದ್ದರು.
ಇನ್ನೂ ಹೋಗದ ಆತಂಕ : ಇನ್ನು ಎರಡು ಮೂರು ಚಿರತೆಗಳು ಗ್ರಾಮಸ್ಥರ ಕಣ್ಣಿಗೆ ಕಂಡಿದ್ದು ಹಾಗಾಗಿ ಜನರಲ್ಲಿ ಭಯದ ವಾತಾವರಣ ಸಹ ಸೃಷ್ಟಿಯಾಗಿದೆ, ಚಿರತೆಯ ಹಾವಳಿಯಿಂದ ಸುಮಾರು ಟಗರು ಕುರಿ, ಮೇಕೆ,ಬಾತುಕೋಳಿ, ಕೋಳಿಯನ್ನು ತಿಂದಿದ್ದು ಗ್ರಾಮಸ್ಥರಾದ ಮಂಜುನಾಥ್ ಎಂಬವರಿಗೆ ಐವತ್ತು ಸಾವಿರಕ್ಕೂ ಹೆಚ್ಚು ನಷ್ಟ ಸಂಭವಿಸಿದೆ ಎನ್ನುತ್ತಾರೆ ಗ್ರಾಮಸ್ಥರು.