ಬೆಂಗಳೂರಿಗರ ನಿದ್ದೆಗೆಡಿಸಿದ ಚಿರತೆ, ಸಿಲಿಕಾನ್‌ ಸಿಟಿಗೆ ಮತ್ತೆ ಎಂಟ್ರಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಗರದ ಹೊರವಲಯದಲ್ಲಿ ಮತ್ತೆ ಚಿರತೆ ಆತಂಕ ಶುರುವಾಗಿದೆ. ರಾತ್ರಿ ಹೊತ್ತು ಆಗಾಗ್ಗೆ ಕಾಣಿಸಿಕೊಳ್ಳುತ್ತಿರುವ ಚಿರತೆ. ಯಲಹಂಕ ವಿಮಾನ ನಿಲ್ದಾಣದ ಸುತ್ತಾ ಮುತ್ತಾ ಇರುವ ಜನರಲ್ಲಿ ಭಯ ಹುಟ್ಟಿಸಿದೆ.

ಅಕ್ಟೋಬರ್ 29ರ‌ ಸಂಜೆ 7 ಗಂಟೆ ಸುಮಾರಿಗೆ ಯಲಹಂಕ  ತಾಲೂಕಿನ ನೆಲ್ಲುಕುಂಟೆ ಗ್ರಾಮದಲ್ಲಿರೊ ಇದೇ ಗೋಡೆಯ ಮೇಲೆ ಚಿರತೆ ಹೆಜ್ಜೆ ಹಾಕಿತ್ತು. ಅದೇ ಚಿರತೆಯ ದೃಶ್ಯ ಪಕ್ಕದಲ್ಲೇ ನಿರ್ಮಾಣ ಆಗ್ತಿರೊ ಕಟ್ಟಡದಲ್ಲಿ ಕೆಲಸ ಮಾಡ್ತಿದ್ದ ಕಾರ್ಮಿಕರ ಮೊಬೈಲ್ ನಲ್ಲಿ ಸೆರೆ ಹಿಡಿಯಲಾಗಿದೆ. ಆ ದೃಶ್ಯ ವೈರಲ್ ಆಗುತ್ತಿದ್ದಂತೆ ಸ್ಥಳೀಯರಲ್ಲಿ ಆತಂಕ ಹುಟ್ಟು ಹಾಕಿದೆ. ಏರ್ಪೋರ್ಟ್ ರಸ್ತೆಯ ಹುಣಸೆಮಾರನಹಳ್ಳಿ, ನೆಲ್ಲುಕುಂಟೆ, ಗಂಡಿಗೆನಹಳ್ಳಿ ಜನರು ಘಟನೆಯಿಂದ ತಲ್ಲಣಗೊಂಡಿದ್ದಾರೆ.

ದಯವಿಟ್ಟು ವ್ಯಾಘ್ರನನ್ನು ಹಿಡಿದು ಕಾಡಿಗೆ ಓಡಿಸಿ ಎಂದು ಜನ ಮನವಿ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!