ಬ್ರೇಕ್ ಫೇಲ್ಯೂರ್ ಆಗಿ ರೈಲ್ವೆ ಹಳಿ ಮೇಲೆ ಏರಿದ ಲಾರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ಸಿಮೆಂಟ್ ಬಲ್ಕರ್ ಲಾರಿಯೊಂದು (Lorry) ಬ್ರೇಕ್ ಫೇಲ್ಯೂರ್ (Break Failure) ರೈಲ್ವೆ ಹಳಿ (Railway Track) ಮೇಲೆ ಅಡ್ಡಲಾಗಿ ನಿಂತ ಘಟನೆ ಚಿಕ್ಕಬಳ್ಳಾಪುರ (Chikkaballapura) ನಗರ ಹೊರವಲಯದ ಬಿಬಿ ರಸ್ತೆಯ ಅಪ್ಪಾಲು ಪೆಟ್ರೋಲ್ ಬಂಕ್ ಹಿಂಭಾಗ ನಡೆದಿದೆ.

ಬೆಂಗಳೂರು (Bengaluru) ಕಡೆಯಿಂದ ಚಿಕ್ಕಬಳ್ಳಾಪುರದ ಕಡೆಗೆ ಬರುತ್ತಿದ್ದ ಲಾರಿ ಇಳಿಜಾರಿನಲ್ಲಿ ಬ್ರೇಕ್ ಫೇಲ್ಯೂರ್ ಆಗಿದ್ದು, ಚಾಲಕ ರವಿ ಕೂಡಲೇ ಎಡಬದಿಗೆ ಎಳೆದುಕೊಂಡಿದ್ದಾರೆ. ಇದರಿಂದ ಲಾರಿ ಪೆಟ್ರೋಲ್ ಬಂಕ್ ಹಾಗೂ ಟಾಟಾ ಶೋ ರೂಂ ಪಕ್ಕದ ಖಾಲಿ ಜಾಗದಲ್ಲಿ ನುಗ್ಗಿ ರೈಲ್ವೆ ಹಳಿ ಮೇಲೆ ನಿಂತಿದೆ. ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ ಹೊರಡಲು ಸಜ್ಜಾಗಿ ನಿಂತಿದ್ದ ಪ್ಯಾಸೆಂಜರ್ ರೈಲು (Passenger Train) ಇನ್ನೇನು ಬಿಡಬೇಕು ಅನ್ನುವಷ್ಟರಲ್ಲಿ ಈ ಘಟನೆ ನಡೆದಿದೆ.

ಕೂಡಲೇ ರೈಲು ಸಂಚಾರ ನಿಲ್ಲಿಸಲಾಗಿದೆ. 1 ಗಂಟೆಗೆ ಹಾಗೂ 1:40ಕ್ಕೆ ತೆರಳಬೇಕಿದ್ದ ಎರಡು ರೈಲುಗಳ ಸಂಚಾರ ಗಂಟೆಗಟ್ಟಲೇ ಸ್ಥಗಿತವಾಗಿತ್ತು. ಇನ್ನೂ ಒಂದೂವರೆ ಗಂಟೆ ನಂತರ ಕ್ರೇನ್ ಮೂಲಕ ಲಾರಿ ಪಕ್ಕಕ್ಕೆ ಸರಿಸಿ ರೈಲುಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಒಂದೆರೆಡು ನಿಮಿಷ ತಡವಾಗಿದ್ರೂ ರೈಲು ಸಂಚಾರ ಆರಂಭಿಸಿದ್ದರೂ ಲಾರಿಗೆ ಡಿಕ್ಕಿ ಹೊಡೆದು ಅನಾಹುತ ಸಂಭವಿಸುತ್ತಿತ್ತು. ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!